Home » ವಿಳಾಸ ಕೇಳುವ ನೆಪ, ವೈದ್ಯೆಯ ಮೈ ಮುಟ್ಟಿ ವ್ಯಕ್ತಿಯಿಂದ ಅಸಭ್ಯ ವರ್ತನೆ

ವಿಳಾಸ ಕೇಳುವ ನೆಪ, ವೈದ್ಯೆಯ ಮೈ ಮುಟ್ಟಿ ವ್ಯಕ್ತಿಯಿಂದ ಅಸಭ್ಯ ವರ್ತನೆ

0 comments
Hyderabad

ಬೆಂಗಳೂರು: ಮೆಡಿಕಲ್‌ ಕಾಲೇಜಿನಿಂದ ಪಿಜಿಗೆ ತೆರಳುತ್ತಿದ್ದ ವೈದ್ಯೆಯ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿದ ಕಿಡಿಗೇಡಿ ಲೈಂಗಿಕ ಕಿರುಕುಳ ನೀಡಿ ಪರಾರಿಯಾದ ಘಟನೆ ನಡೆದಿರುವ ಕುರಿತು ವರದಿಯಾಗಿದೆ. 28 ವರ್ಷದ ವೈದ್ಯೆ ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲು ಮಾಡಿದ್ದು, ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿದೆ.

ಘಟನೆ ನಡೆದ ಸ್ಥಳದಲ್ಲಿನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿ ಪರಿಶೀಲನೆ ಮಾಡಲಾಗುತ್ತಿದೆ. ರಾತ್ರಿ ಪಾಳಿ ಕೆಲಸ ಮುಗಿಸ ಆಸ್ಪತ್ರೆಯಿಂದ ವೈದ್ಯೆ ನಡೆದುಕೊಂಡು ಹೋಗುವಾಗ ಬಿಳಿ ಬಣ್ಣದ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿ ವಿಳಾಸ ಕೇಳುವ ನೆಪದಲ್ಲಿ ವೈದ್ಯೆಯನ್ನು ಮಾತನಾಡಿದ್ದು, ಸ್ಕೂಟರ್‌ನಿಂದ ಇಳಿದು ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ. ವೈದ್ಯೆ ಜೋರಾಗಿ ಕಿರುಚಿದಾಗ ಆತ ಸ್ಥಳದಲ್ಲಿ ಪರಾರಿಯಾಗಿದ್ದಾನೆ.

ಸಂತ್ರಸ್ತೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆಗೆ ವೈದ್ಯೆ ದೂರನ್ನು ನೀಡಿದ್ದು,ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ನಡೆಸಿದ್ದಾರೆ.

You may also like