ಕೊಚ್ಚಿ: ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಕಪ್ಪು ಹಣದ ವಹಿವಾಟಿನ ತನಿಖೆಗಾಗಿ ಜಾರಿ ನಿರ್ದೇಶ ನಾಲಯ ಕೊಚ್ಚಿ ಘಟಕದ ಸಹಾಯಕ ನಿರ್ದೇಶಕ ಆಶು ಗೋಯಲ್ ನೇತೃತ್ವದಲ್ಲಿ 10 ಸದಸ್ಯರ ತನಿಖಾ ತಂಡ ರಚಿಸಲಾಗಿದೆ.
ಹತ್ತು ದಿನಗಳಲ್ಲಿ ಪ್ರಾಥಮಿಕ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಆರೋಪಿಗಳು ಮತ್ತು ಇತರರಿಗೆ ನೋಟಿಸ್ ನೀಡಲಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳ ಬ್ಯಾಂಕ್ ಹಾಗೂ ಇತರ ದಾಖಲೆಗಳನ್ನು ಪತ್ತೆ ಹಚ್ಚಲಿದೆ. ಪ್ರಕರಣದ ಆರೋಪಿಗಳು ಕಪ್ಪು ಹಣದ ವಹಿವಾಟು ಮಾತ್ರ ಹಣ ಅಕ್ರಮ ವರ್ಗಾವಣೆ ತಡೆ ಕಾಯಿದೆ ವ್ಯಾಪ್ತಿಗೆ ಒಳಪಟ್ಟಿದ್ದು, ತನಿಖೆಯಲ್ಲಿಲಭಿಸುವ ಪುರಾವೆಗಳು ಮತ್ತು ಇತರ ಮಾಹಿತಿಯನ್ನು ಸಂಬಂಧಿತ ತನಿಖಾ ಏಜೆನ್ಸಿಗಳಿಗೆ ಹಸ್ತಾಂತರಿಸಲಿದೆ.
ಆರೋಪಿಗಳು ಶಬರಿಮಲೆಯಿಂದ ಕದ್ದ ಚಿನ್ನ ಹಾಗೂ ಅಮೂಲ್ಯ ವಸ್ತುಗಳ ಮಾರಾಟದಿಂದ ಗಳಿಸಿದ ಸಂಪತ್ತನ್ನು ಪತ್ತೆಹಚ್ಚಿ ಮುಟ್ಟುಗೋಲು ಹಾಕಿಕೊಳ್ಳಲಿದೆ. ಶಬರಿಮಲೆ ಪ್ರಕರಣದ ಅಂತಾರಾಷ್ಟ್ರೀಯ ಸಂಪರ್ಕಗಳನ್ನು ತನಿಖೆ ಮಾಡಲಾಗುವುದು ಎಂದು ತನಿಖೆಯ ಮೇಲುಸ್ತುವಾರಿ ವಹಿಸಿರುವ ಇ.ಡಿ ಕೊಚ್ಚಿಘಟಕದ ಹೆಚ್ಚುವರಿ ನಿರ್ದೇಶಕ ರಾಕೇಶ್ ಕುಮಾರ್ ತಿಳಿಸಿದ್ದಾರೆ.
