Home » Renuka Swamy: ಪಟ್ಟಣಗೆರೆ ಶೆಡ್ ನಲ್ಲಿ, ಹೆಣ ಎಸೆದ ಮೋರಿ ಬಳಿ ಕೇಳುತ್ತಿದೆ ಆತ್ಮದ ಅರಚಾಟ, ಕಿರುಚಾಟ !! ದೆವ್ವ ಆದ್ನಾ ರೇಣುಕಾ ಸ್ವಾಮಿ?!

Renuka Swamy: ಪಟ್ಟಣಗೆರೆ ಶೆಡ್ ನಲ್ಲಿ, ಹೆಣ ಎಸೆದ ಮೋರಿ ಬಳಿ ಕೇಳುತ್ತಿದೆ ಆತ್ಮದ ಅರಚಾಟ, ಕಿರುಚಾಟ !! ದೆವ್ವ ಆದ್ನಾ ರೇಣುಕಾ ಸ್ವಾಮಿ?!

0 comments
Renuka Swamy

Renuka Swamy: ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್(Darshan) ವಿರುದ್ಧ ಸಾವಿರ ಸಾವಿರ ಪುಟುಗಳ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತಿರುವ ಸಂದರ್ಭದಲ್ಲೇ ರೇಣುಕಾ ಸ್ವಾಮಿ ಕುರಿತು ಕೆಲವು ವಿಚಿತ್ರ ಸುದ್ದಿಗಳು ಹರಡುತ್ತಿವೆ. ರೇಣುಕಾ ಸ್ವಾಮಿ(Renukaswamy) ದೆವ್ವವಾಗಿದ್ದಾನೆ ಎಂಬ ಸುದ್ದಿಯಂತೂ ಸಾಕಷ್ಟು ಗುಲ್ಲೆಬ್ಬುತ್ತಿದೆ.

ಹೌದು,  ರೇಣುಕಾಸ್ವಾಮಿ ಕೊಲೆ ನಡೆದ ಜಾಗ ಪಟ್ಟಣಗೆರೆ ಶೆಡ್ & ರೇಣುಕಾಸ್ವಾಮಿ ಕೊಲೆ ಆಗಿ ನಂತರ ಹೆಣವಾಗಿ ಸಿಕ್ಕಿದ್ದ ಜಾಗ ಮೋರಿ ಬಳಿ ಹಾಗೂ ಕೊಲೆ ನಡೆದ ಪಟ್ಟಣಗೆರೆ ಶೆಡ್ ಒಳಗೆ ಕೂಡ ಆತ್ಮದ ಕೂಗಾಟ ಜೋರಾಗಿದೆಯಂತೆ. ಅಲ್ಲೆಲ್ಲಾ ಇದೀಗ ಆತ್ಮದ ಅರಚಾಟ & ಕಿರುಚಾಟ ಹೆಚ್ಚಾಗಿದೆಯಂತೆ. ರಾತ್ರಿ ಸಮಯದಲ್ಲಿ ರೇಣುಕಾಸ್ವಾಮಿ ಹೆಣ ಸಿಕ್ಕ ಜಾಗದಲ್ಲಿ ಯಾರೋ ಜೋರಾಗಿ ಅಳುತ್ತಾ ಮತ್ತು ನರಳಾಡುತ್ತಾ ಇರುವಂತೆ ಸದ್ದು ಕೇಳಿಬರುತ್ತಿದೆಯಂತೆ. ಹೀಗಾಗಿ ನಾವು ಆ ಜಾಗದಲ್ಲಿ ರಾತ್ರಿ ವೇಳೆ ಓಡಾಡುತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ ಎಂಬ ಸುದ್ದಿ ಈಗ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗುತ್ತಿದೆ.

ಬರ್ಬರವಾಗಿ ಕೊಂಡ ಡಿ ಗ್ಯಾಂಗ್!!
ದರ್ಶನ್ ತೂಗುದೀಪ್ & ಗ್ಯಾಂಗ್ ಸೇರಿಕೊಂಡು ರೇಣುಕಾಸ್ವಾಮಿ ಎಂಬ ವ್ಯಕ್ತಿಯನ್ನ ತೀವ್ರ ರೀತಿ ಹಲ್ಲೆ ಮಾಡಿ, ಎತ್ತಿ ಎತ್ತಿ ಬಿಸಾಡಿ, ಮರ್ಮಾಂಗದ ಸಿಪ್ಪೆ ಸುಲಿದು, ಸಿಗರೇಟ್ & ಇತರ ವಸ್ತುಗಳ ಬಳಸಿ ಬರೆ ಹಾಕಿ, ತಲೆ ಮೇಲೆ ತೂತು ಮಾಡಿ, ಮರ್ಮಾಂಗಕ್ಕೆ ಜಾಡಿಸಿ ಒದ್ದು, ಕರೆಂಟ್ ಶಾಕ್ ಕೊಟ್ಟು ಬರ್ಬರವಾಗಿ ಕೊಲೆ ಮಾಡಿದೆ ಎನ್ನುವ ಆರೋಪ ಇದೆ.

You may also like

Leave a Comment