Home » Shubha Case: ಗಿರೀಶ್‌ ಹತ್ಯೆ ಪ್ರಕರಣ: ರಿಂಗ್‌ರೋಡ್‌ ಶುಭಾಗೆ ಜೀವಾವಧಿ ಕಾಯಂ

Shubha Case: ಗಿರೀಶ್‌ ಹತ್ಯೆ ಪ್ರಕರಣ: ರಿಂಗ್‌ರೋಡ್‌ ಶುಭಾಗೆ ಜೀವಾವಧಿ ಕಾಯಂ

by V R
0 comments

Shubha Case: 2003 ಭಾವಿ ಪತಿ ಸಾಫ್ಟ್‌ವೇರ್‌ ಇಂಜಿನಿಯರ್‌ ಬಿ.ವಿ.ಗಿರೀಶ್‌ ಹತ್ಯೆ ಪ್ರಕರಣದಲ್ಲಿ ಶುಭಾ ಮತ್ತು ಆಕೆಯ ಪ್ರಿಯಕರ ಸೇರಿ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಖಾಯಂ ಮಾಡಿ ಸುಪ್ರೀಂ ಕೋರ್ಟ್‌ ಸೋಮವಾರ ಅಂತಿಮ ತೀರ್ಪು ನೀಡಿದೆ.

ಪ್ರಕರಣ ಕುರಿತು ತಮಗೆ ಜೀವಾವಧಿ ಶಿಕ್ಷೆ ವಿಧಿಸಿ 2010 ರಲ್ಲಿ ಅಧೀನ ನ್ಯಾಯಾಲಯ ಮತ್ತು 2011ರಲ್ಲಿ ಹೈಕೋರ್ಟ್‌ ಹೊರಡಿಸಿದ್ದ ತೀರ್ಪು ರದ್ದು ಮಾಡಬೇಕು ಮತ್ತು ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಕೋರಿ ಆರೋಪಿಗಳಾದ ಡಿ.ಅರುಣ್‌ ವರ್ಮಾ (ಎ1), ಎ.ವೆಂಕಟೇಶ್‌ (ಎ2), ದಿನೇಶ್‌ (ಎ3), ಮತ್ತು ಶುಭಾ (ಎ2) ಸುಪ್ರೀಂಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಕೆ ಮಾಡಿದ್ದರು.

ಈ ನಾಲ್ವರ ಕ್ರಿಮಿನಲ್‌ ಮೇಲ್ಮನವಿಗಳನ್ನು ವಜಾ ಮಾಡಿ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್‌ ಮತ್ತು ನ್ಯಾಯಮೂರ್ತಿ ಎನ್‌.ಕೆ.ಸಿಂಗ್‌ ಅವರಿದ್ದ ವಿಭಾಗೀಯ ಪೀಠ ಸೋಮವಾರ ಆದೇಶ ಮಾಡಿದೆ.

ಸುಪ್ರೀಂಕೋರ್ಟ್‌ ತನ್ನ ಆದೇಶದಲ್ಲಿ ಶುಭಾ ಹಾಗೂ ಪ್ರಕರಣದ ಇತರ ಮೂವರು ಆರೋಪಿಗಳು ಸಂಚು ಮಾಡಿ ಗಿರೀಶ್‌ ಕೊಲೆ ಮಾಡಿರುವುದು ಎಲ್ಲಾ ಸಾಕ್ಷ್ಯಾಧಾರಗಳಿಂದ ಸಾಬೀತಾಗಿರುವುದರಿಂದ ಆರೋಪಿಗಳಿಗೆ ಹೈಕೋರ್ಟ್‌ ವಿಧಿಸಿರುವ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿಯಲಾಗುತ್ತದೆ ಎಂದು ಹೇಳಿದೆ.

2003 ರಲ್ಲಿ ಗಿರೀಶ್‌ ಕೊಲೆ ಆಗಿರುವುದು. ಆಗ ಎಲ್ಲಾ ನಾಲ್ವರು ಆರೋಪಿಗಳು ಯೌನದಲ್ಲಿದ್ದರು. ಮೃತ ಗಿರೀಶ್‌ನನ್ನು ಮದುವೆಯಾಗಲು ಶುಭಾಗೆ ಇಷ್ಟವಿರಲಿಲ್ಲ. ತಿಳುವಳಿಕೆಯ ಕೊರತೆಯಿಂದ ಗಿರೀಶ್‌ನನ್ನು ಕೊಲೆ ಮಾಡಲಾಗಿದೆ. ಎರಡು ದಶಕಗಳೇ ಕಳೆದಿದೆ ಈ ಕೃತ್ಯ ನಡೆದು. ಮೂರನೇ ಆರೋಪಿ ದಿನೇಶ್‌ಗೆ 28 ವರ್ಷ, ಈತನಿಗೆ ಇತ್ತೀಚೆಗೆ ಮದುವೆಯಾಗಿದ್ದು, ಮಗು ಇದೆ. ಜೈಲಿನಲ್ಲಿದ್ದ ಸಂದರ್ಭದಲ್ಲಿ ಆರೋಪಿಗಳು ಸನ್ನಡತೆ ತೋರಿದ್ದಾರೆ. ಅವರೆಲ್ಲ ಹುಟ್ಟಿನಿಂದ ಕ್ರಿಮಿನಲ್‌ಗಳಲ್ಲ. ಆದರೆ ಒಂದು ಅಪಾಯಕಾರಿ ಕೆಲಸ ಮಾಡಲು ಜೀವನದಲ್ಲಿ ತೆಗೆದುಕೊಂಡು ಕೆಟ್ಟ ತೀರ್ಮಾನ ಅವರನ್ನು ಈ ಪರಿಸ್ಥಿತಿಗೆ ತಳ್ಳಿದೆ ಎಂದು ನ್ಯಾಯಾಲವು ಹೇಳಿದೆ.

ಈಗ ಆರೋಪಿಗಳು ಮಧ್ಯ ವಯಸ್ಕರಾಗಿದ್ದಾರೆ. ಅವರಿಗೆ ಹೊಸ ಜೀವನ ಆರಂಭಿಸುವ ಒಂದು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಕ್ಷಮಾದಾನ ಕೋರಿ ಶುಭಾ ಹಾಗೂ ಇತರೆ ಆರೋಪಿಗಳು ಮುಂದಿನ 8 ವಾರಗಳಲ್ಲಿ ರಾಜ್ಯಪಾಲರಿಗೆ ಕ್ಷಮಾದಾನ ಅರ್ಜಿ ಸಲ್ಲಿಸಬಹುದು. ಆ ಮನವಿಯನ್ನು ರಾಜ್ಯಪಾಲರು ಪರಿಗಣಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ರಾಜ್ಯಪಾಲರು ಕ್ಷಮಾದಾನದ ಮನವಿಯನ್ನು ನಿರ್ಧಾರ ಮಾಡುವವರೆಗೂ ಜಾಮೀನು ಮೇಲಿರುವ ಆರೋಪಿಗಳನ್ನು ಬಂಧನ ಮಾಡಬಾರದು ಎಂದು ಪೊಲೀಸರಿಗೆ ನ್ಯಾಯಪೀಠ ನಿರ್ದೇಶಿಸಿದೆ.

You may also like