Crime News: ಅಕ್ರಮ ಸಂಬಂಧ ಪ್ರಶ್ನಿಸಿದ ತಾಯಿಯ ಕಪಾಳಕ್ಕೆ ಬಾರಿಸಿ, ಬೆದರಿಕೆ ಹಾಕಿದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಲಾಗಿದೆ. ತಾಯಿಗೆ ಹಲ್ಲೆ ಮಾಡಿರುವ ಆರೋಪಕ್ಕೆ ಹೊತ್ತಿರುವ ಎಸ್‌ಐ ಮಂಜುನಾಥ್‌ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಅಷ್ಟೇ ಅಲ್ಲದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಗೊಳಿಸಲಾಗಿದೆ. ಹಾಗೂ ಮೂರು ದಿನದೊಳಗೆ ಸ್ಪಷ್ಟನೆ ನೀಡುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ವರದಿಯಾಗಿದೆ.
ಘಟನೆ ವಿವರ:
ತಾಯಿಯೊಬ್ಬರು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿರುವ ಪುತ್ರನ ವಿರುದ್ಧವೇ ಕೆ.ಆರ್.ಪುರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕು ಹಣಬೆ ಗ್ರಾಮದ ಮಂಗಳಮ್ಮ ನೀಡಿದ ದೂರಿನ ಮೇರೆಗೆ ಆಕೆಯ ಪುತ್ರ ಪಿಎಸ್‌ಐ ಮಂಜುನಾಥ, ಗೆಳತಿ ಬಸವಜ್ಯೋತಿ, ಈಕೆಯ ಸಹೋದರ ಬಸವಪ್ರಭು ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದೆ. ಮಂಗಳಮ್ಮ ಅವರು ನೀಡಿದ ದೂರಿನಲ್ಲಿ ನನಗೆ ಪುತ್ರ ಮಂಜುನಾಥ, ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಂಜುನಾಥ್ ರಾಮಮೂರ್ತಿ ನಗರ ಠಾಣೆಯಲ್ಲಿ ಎಸ್‌ಐ ಆಗಿದ್ದಾರೆ. ಮಂಜುನಾಥನಿಗೆ 2011 ರಲ್ಲಿ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಪುತ್ರನಿಗೆ ಆಕೆಯ ಸಹವಾಸ ಬಿಟ್ಟುಬಿಡು ಎಂದು ಬುದ್ಧಿ ಹೇಳಿದರೂ ಆತ ಕೇಳಲಿಲ್ಲ. ಬಸವ ಜ್ಯೋತಿ ಜೊತೆಗೆ ಈತನಿಗೆ ಸಂಬಂಧವಿದ್ದು, ವರ್ಷದ ಹಿಂದೆ ವಿಚಾರ ತಿಳಿದಿದ್ದು, ಬುದ್ಧಿವಾದ ಹೇಳಿದರೂ ಪುತ್ರ ಸಹವಾಸ ಬಿಟ್ಟಿಲ್ಲ. ಜ್ಯೋತಿ ಮನೆಗೆ ನನ್ನ ಪುತ್ರಿಯರ ಜೊತೆ ಹೋದಾಗ ಅಲ್ಲಿ ಮಂಜುನಾಥನನ್ನು ಆಕೆ ಕರೆಸಿದ್ದಾಳೆ. ಅನಂತ ಆತ ಬಂದು ನನಗೆ ಬೆದರಿಕೆ ಹಾಕಿ, ಕಪಾಳಮೋಕ್ಷ ಮಾಡಿದ್ದಾನೆ ಎಂದು ಮಂಗಳಮ್ಮ ತಿಳಿಸಿದ್ದಾರೆ.
