Home » Sindhanur: ಗಂಡೆಂದು ಹೆಣ್ಣು ಮಗು ಕೊಟ್ಟ ಸಿಬ್ಬಂದಿ: ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು

Sindhanur: ಗಂಡೆಂದು ಹೆಣ್ಣು ಮಗು ಕೊಟ್ಟ ಸಿಬ್ಬಂದಿ: ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶು ಅದಲು-ಬದಲು

by V R
0 comments
Baby Alive before Cremation

Sindhanur: ಜಿಲ್ಲೆಯ ಸಿಂಧನೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ನವಜಾತ ಶಿಶುಗಳನ್ನು ಅದಲು ಬದಲು ಮಾಡಿದ ಆರೋಪ ಕೇಳಿ ಬಂದಿದೆ. ಗಂಡು ಮಗು ಆಗಿದೆ ಎಂದು ಹೇಳಿ ನಂತರ ಹೆಣ್ಣು ಮಗು ಹುಟ್ಟಿದೆ ಎಂದು ಆಸ್ಪತ್ರೆ ಸಿಬ್ಬಂದಿ ಹೇಳಿರುವ ಘಟನೆ ನಡೆದಿದೆ. ಸಿಂಧನೂರು ನಗರ ಪೊಲೀಸ್‌ ಠಾಣೆಗೆ ಕುಟುಂಬದವರು ದೂರನ್ನು ನೀಡಿದ್ದಾರೆ.

ಹುಲ್ಲಪ್ಪ ಮತ್ತು ರೇವತಿ ದಂಪತಿ ಮಗು ಅದಲು-ಬದಲು ಮಾಡಿರುವ ಆರೋಪ ಕೇಳಿಬಂದಿದೆ. ರೇವತಿಗೆ ಗಂಡು ಮಗು ನೀಡಿ ಎದೆ ಹಾಲುಣಿಸಲು ಆಸ್ಪತ್ರೆ ಸಿಬ್ಬಂದಿ ಹೇಳಿದ್ದಾರೆ. ಅನಂತರ ಆಸ್ಪತ್ರೆ ಸಿಬ್ಬಂದಿ ನಿಮಗೆ ಹೆಣ್ಣು ಮಗು ಹುಟ್ಟಿದೆ ಎಂದು ಹೇಳಿದ್ದಾರೆ. ನಿಮಗೆ ಸಿಸೇರಿಯನ್‌ ಆಗಿ ಹೆಣ್ಣು ಮಗು ಹುಟ್ಟಿದೆ ಎಂದು ನರ್ಸ್‌ಗಳು ಹೇಳಿದ್ದಾರೆ. ಆಸ್ಪತ್ರೆ ಸಿಬ್ಬಂದಿಯ ನಡವಳಿಕೆಯ ಬಗ್ಗೆ ರೇವತಿ ಕುಟುಂಬದವರು ಗಂಭೀರ ಆರೋಪ ಮಾಡಿರುವ ಕುರಿತು ವರದಿಯಾಗಿದೆ.

You may also like