Home » Soujanya Murder Case: ಯೂಟ್ಯೂಬರ್‌ ಸಮೀರ್‌ ವಿರುದ್ಧ 10ಕೋಟಿ ಮಾನನಷ್ಟ ಕೇಸು!

Soujanya Murder Case: ಯೂಟ್ಯೂಬರ್‌ ಸಮೀರ್‌ ವಿರುದ್ಧ 10ಕೋಟಿ ಮಾನನಷ್ಟ ಕೇಸು!

0 comments

Soujanya Murder Case: ಸೌಜನ್ಯ ಕೊಲೆ ಹಾಗೂ ಅತ್ಯಾಚಾರ ಪ್ರಕರಣ ಸಂಬಂಧ ಕೋರ್ಟ್‌ ಆದೇಶವನ್ನು ಉಲ್ಲಂಘನೆ ಮಾಡಿ ಎರಡನೇ ವಿಡಿಯೋ ಬಿಟ್ಟಿರುವ ಆರೋಪದಲ್ಲಿ ʼದೂತʼ ಹೆಸರಿನ ಯೂಟ್ಯೂಬರ್‌ ಸಮೀತ್‌ ಎಂಡಿ ಸಮೀರ್‌ ವಿರುದ್ಧ 10 ಕೋಟಿ ಮಾನನಷ್ಟ ಮೊಕದ್ದಮೆ ದಾಖಲಾಗಿರುವ ಕುರಿತು ವರದಿಯಾಗಿದೆ.

ಕೋರ್ಟ್‌ ಈ ಹಿಂದೆ ಸೌಜನ್ಯಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳವನ್ನು ಗುರಿಯಾಗಿಸಿ ಈ ಹಿಂದೆ ಮಾಡಿರುವ ವಿಡಿಯೋ ತೆಗೆದುಹಾಕಲು ಮತ್ತು ವಿಡಿಯೋ ಮಾಡದಂತೆ ತಡೆಯಾಜ್ಞೆ ನೀಡಿತ್ತು. ಆದರೆ ತಡೆಯಾಜ್ಞೆ ಆದೇಶವನ್ನು ಉಲ್ಲಂಘನೆ ಮಾಡಿ ಎರಡನೇ ವಿಡಿಯೋ ಬಿಟ್ಟಿರುವ ಹಿನ್ನೆಲೆ ಸಮೀರ್‌ ಸಮೀರ್‌ ಎಂಡಿ ಮೇಲೆ ಮಾನನಷ್ಟು ಮೊಕದ್ದಮೆ ದಾಖಲು ಮಾಡಲಾಗಿದೆ.

10 ಕೋಟಿ ಮಾನನಷ್ಟ ಮೊಕದ್ದಮೆಯನ್ನು ಧರ್ಮಸ್ಥಳದ ಹರ್ಷೇಂದ್ರ ಮತ್ತು ನಿಶ್ಚಲ್‌ ಹೂಡಿದ್ದಾರೆ ಎಂದು ವರದಿಯಾಗಿದೆ.

ಡಿ.ನಿಶ್ಚಲ್‌ ಮತ್ತು ಡಿ. ಹರ್ಷೇಂದ್ರ ಕುಮಾರ್‌ ಅವರು ಮೂಲ ದಾವೆ ಸಲ್ಲಿಸಿದ್ದಾರೆ.

ದೂತ ಯೂಟ್ಯೂಬ್‌ ಚಾನೆಲ್‌ನಲ್ಲಿ ಧರ್ಮಸ್ಥಳ ವಿಲೇಜ್‌ ಹಾರರ್‌ ಪಾರ್ಟ್‌- 2/ಸಾಕ್ಷಿ ನಾಶ/ಸೌಜನ್ಯ ಕೇಸ್‌ ಹೆಸರಿನಲ್ಲಿ ವಿಡಿಯೋ ಅಪ್ಲೋಡ್‌ ಮಾಡಲಾಗಿದೆ. ಈ ವೀಡಿಯೋಗಳನ್ನು ಡಿಲೀಟ್‌ ಮಾಡಲು ನ್ಯಾಯಾಲಯ ಆದೇಶಿಸಿದ್ದರೂ ಮತ್ತೆ ಅಪ್ಲೋಡ್‌ ಮಾಡಿ, ಮಾನನಷ್ಟ ಉಂಟು ಮಾಡಲಾಗಿದೆ. ಇದರಿಂದ 10ಕೋಟಿ ರೂ. ನಷ್ಟ ಪರಿಹಾರ ಪಾವತಿಸಲು ಎಂ.ಡಿ.ಸಮೀರ್‌ಗೆ ಆದೇಶಿಸಬೇಕು. ಮಧ್ಯಂತರ ಪರಿಹಾರವಾಗಿ ವಿವಾದಿತ ವಿಡಿಯೋವನ್ನು ಚಾನೆಲ್‌ನಿಂದ ತೆಗೆದುಹಾಕಲು ಆದೇಶಿಸಬೇಕು ಎಂದು ದಾವೆಯಲ್ಲಿ ಕೋರಲಾಗಿದೆ.

 

You may also like