Home » Gang Rape: ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

Gang Rape: ಕೊಯಮತ್ತೂರಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌

0 comments
Gang rape

Chennai: ತಮಿಳುನಾಡಿನಲ್ಲಿ ಅಣ್ಣಾ ವಿವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ, ಕೃಷ್ಣಗಿರಿಯಲ್ಲಿ ಶಾಲಾ ವಿದ್ಯಾರ್ಥಿನಿ ಮೇಲಿನ ಲೈಂಗಿಕ ದೌರ್ಜನ್ಯದ ಬೆನ್ನಿಗೆ ಕೊಯಮತ್ತೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಆಕೆಯ ಸಹಪಾಠಿ ವಿದ್ಯಾರ್ಥಿಗಳೇ ಗ್ಯಾಂಗ್‌ ರೇಪ್‌ ಮಾಡಿದ ಘಟನೆಯೊಂದು ನಡೆದಿದೆ.

ಭಾನುವಾರ ಶೈಕ್ಷಣಿಕ ಪ್ರಯಾಣ ಸಂದರ್ಭದಲ್ಲಿ ದಾರಿಯಲ್ಲಿ ಬೈಕ್‌ ಅಡ್ಡಗಟ್ಟಿದ ಏಳು ಮಂದಿ ವಿದ್ಯಾರ್ಥಿಗಳು ಸಂತ್ರಸ್ತೆ ಮೇಲೆ ದೌರ್ಜನ್ಯ ಎಸಗಿ ಪರಾರಿಯಾಗಿದ್ದರು. ಸಂಜೆ ವೇಳೆಯಾದರೂ ಮನೆಗೆ ಮಗಳು ಬಾರದಿದ್ದನ್ನು ಕಂಡು ಉಕ್ಕಡಂ ಪೊಲೀಸ್‌ ಠಾಣೆಗೆ ತೆರಳಿದ ತಂದೆಯು ಮಗಳು ಕಾಣೆಯಾಗಿದ್ದಾಳೆ ಎಂಬ ದೂರನ್ನು ನೀಡಿದ್ದರು. ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಂತ್ರಸ್ತೆಯ ಸ್ನೇಹಿತರನ್ನು ವಿಚಾರಣೆ ಮಾಡಿದಾಗ ಕೃತ್ಯ ಬೆಳಕಿಗೆ ಬಂದಿದೆ.

ಏಳು ಮಂದಿ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧನ ಮಾಡಿದ್ದಾರೆ. ಸಂತ್ರಸ್ತೆಗೆ 17 ವರ್ಷ ತುಂಬಿದ್ದರಿಂದ ಫೋಕ್ಸೋ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

You may also like