Home » Crime News: ನಿತ್ಯ ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕ : ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು

Crime News: ನಿತ್ಯ ಶಾಲೆಗೆ ಕುಡಿದು ಬರುತ್ತಿದ್ದ ಶಿಕ್ಷಕ : ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿದ್ಯಾರ್ಥಿಗಳು

1 comment
Crime News

Crime News: ಶಿಕ್ಷಕನೊಬ್ಬ ದಿನನಿತ್ಯ ಕುಡಿದು ತರಗತಿಗೆ ಬಂದು ಪಾಠ ಮಾಡುವ ಬದಲು ತರಗತಿಯ ನೆಲದ ಮೇಲೆ ಮಲಗುತ್ತಿದ್ದ, ಈ ವೇಳೆ ವಿದ್ಯಾರ್ಥಿಗಳು ತರಗತಿ ತೆಗೆದುಕೊಳ್ಳುವಂತೆ ಕೇಳಿದಾಗ ಮಕ್ಕಳನ್ನು ಕೆಟ್ಟದಾಗಿ ನಿಂದಿಸುತ್ತಿದ್ದ, ಇದರಿಂದ ರೋಸಿ ಹೋದ ಮಕ್ಕಳು ಶಿಕ್ಷಕನನ್ನು ಚಪ್ಪಲಿಯಲ್ಲಿ ಹೊಡೆದು ಓಡಿಸಿರುವ ಘಟನೆ ಛತ್ತೀಸ್‌ಗಢದ ಬಸ್ತಾರ್ ಜಿಲ್ಲೆಯಲ್ಲಿ ನಡೆದಿದೆ.

ಇದನ್ನೂ ಓದಿ: PM Narendra Modi: ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ : ಸಚಿವ ಶಿವರಾಜ್ ತಂಗಡಗಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ ಬಿಜೆಪಿ

ಕುಡಿದ ಅಮಲಿನಲ್ಲಿ ಶಾಲೆಗೆ ಆಗಮಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕರನ್ನು ವಿದ್ಯಾರ್ಥಿಗಳು ಚಪ್ಪಲಿಯಲ್ಲಿ ಹೊಡೆದು ಓಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: Actor Chiranjeevi: ಬೆಂಗಳೂರಿನ ನೀರಿನ ಸಮಸ್ಯೆಗೆ ಪರ್ಮಾಕಲ್ಚರ್ ಪರಿಹಾರ ಸೂಚಿಸಿದ ತೆಲುಗು ನಟ ಚಿರಂಜೀವಿ

ಪಲ್ಲಿಭಟ ಗ್ರಾಮದ ಶಾಲೆಯಲ್ಲಿ ಈ ಘಟನೆ ನಡೆದಿದ್ದು ವಿಡಿಯೋ ಮಂಗಳವಾರ ಬೆಳಕಿಗೆ ಬಂದಿದೆ, ಈ ಕುರಿತು ತನಿಖೆ ನಡೆಸುವಂತೆ ಬಸ್ತಾರ ಜಿಲ್ಲಾಧಿಕಾರಿ ಕೆ ವಿಜಯ್ ದಯಾರಾಮ್ ಬಿಇಒ ಅವರಿಗೆ ಆದೇಶಿಸಿರುವುದಾಗಿ ಸುದ್ದಿಗಾರರಿಗೆ ತಿಳಿಸಿದರು. ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ವೀಡಿಯೋದಲ್ಲಿ, ಶಾಲಾ ಸಮವಸ್ತ್ರದಲ್ಲಿ ಕೆಲವು ಮಕ್ಕಳು ಪಾದರಕ್ಷೆಗಳನ್ನು ಅವನ ಮೇಲೆ ಎಸೆಯುತ್ತಿರುವಾಗ ವ್ಯಕ್ತಿ ತಪ್ಪಿಸಿಕೊಳ್ಳಲು ತನ್ನ ಬೈಕ್ ಹತ್ತಿ ಪರಾರಿಯಾಗುತ್ತಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳು ಆತನ ಮೇಲೆ ಚಪ್ಪಲಿ ಎಸೆದು ಹಿಂಬಾಲಿಸಿದಾಗ ವ್ಯಕ್ತಿ ತನ್ನ ಮೋಟಾರುಬೈಕಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾನೆ.

You may also like

Leave a Comment