Home » Suhas Shetty Case: ಸುಹಾಸ್‌ ಶೆಟ್ಟಿ ಹ*ತ್ಯೆ: 11 ಮಂದಿ ವಿರುದ್ಧ NIA ಜಾರ್ಜ್‌ಶೀಟ್‌

Suhas Shetty Case: ಸುಹಾಸ್‌ ಶೆಟ್ಟಿ ಹ*ತ್ಯೆ: 11 ಮಂದಿ ವಿರುದ್ಧ NIA ಜಾರ್ಜ್‌ಶೀಟ್‌

0 comments

Mangalore: ಮಂಗಳೂರಿನಲ್ಲಿ ನಡೆದ ಸುಹಾಸ್‌ ಶೆಟ್ಟಿ ಹ*ತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 11 ಆರೋಪಿಗಳ ವಿರುದ್ಧ ಬೆಂಗಳೂರು ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು, ಸಮಾಜದಲ್ಲಿ ಭಯ ಉಂಟು ಮಾಡುವುದು, ಹಳೇ ದ್ವೇಷದಿಂದಲೇ ಸುಹಾಸ್‌ ಶೆಟ್ಟಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖ ಮಾಡಿದ್ದಾರೆ.

ಮಂಗಳೂರು ಮೂಲದ ಸಫ್ವಾನ್‌ ಅಲಿಯಾಸ್‌ ಕವಲೂರು ಸಫ್ವಾನ್‌, ನಿಯಾಜ್‌ ಅಲಿಯಾಸ್‌ ನಿಯಾ, ಮೊಹಮ್ಮದ್‌ ಮುಸಾಮೀರ್‌, ನೌಷಾದ್‌, ಆದಿಲ್‌ ಮಹರೂಫ್‌, ಅಜರುದ್ದೀನ್‌, ಅಬ್ದುಲ್‌ ಖಾದರ್‌, ಕಲಂದರ್‌ ಶಫಿ, ಎಂ.ನಾಗರಾಜ್‌, ರಂಜಿತ್‌, ಮೊಹಮ್ಮದ್‌ ರಿಜ್ವಾನ್‌ ಎಂಬುವವರ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆ ಮಾಡಿದ್ದಾರೆ.

ಈ ಕುರಿತು ಆದಿಲ್‌ ಮಹರೂಫ್‌, ಸಹಾಸ್‌ ಶೆಟ್ಟಿ ಹಂತಕರಿಗೆ ಹಣ ಪೂರೈಕೆ ಮಾಡಿದ್ದಾನೆ. ಭಯೋತ್ಪಾದನೆ ಹರಡುವುದು, ಭಯ ಉಂಟು ಮಾಡುವುದರ ಜೊತೆ ಹಳೇ ದ್ವೇಷದಿಂದಲೂ ಹತ್ಯೆ ಮಾಡಲಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಬಹುತೇಕ ಮಂದಿ ನಿಷೇಧಿತ ಪಿಎಫ್‌ಐ ಹಾಗೂ ಕೆಎಫ್‌ಡಿ ಮಾಜಿ ಸದಸ್ಯರು ಎಂದು ಹೇಳಲಾಗಿದೆ.

You may also like