Home » Suicide Case: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ತವರು ಮನೆಗೆ ಹೊರಟ ಪತ್ನಿ; ನೊಂದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು

Suicide Case: ಪ್ರೀತಿಸಿ ಮದುವೆಯಾದ ಮೂರೇ ದಿನಕ್ಕೆ ತವರು ಮನೆಗೆ ಹೊರಟ ಪತ್ನಿ; ನೊಂದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಆತ್ಮಹತ್ಯೆಗೆ ಶರಣು

9,359 comments
Suicide Case

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೋರ್ವ ತನ್ನ ಕೌಟುಂಬಿಕ ಸಮಸ್ಯೆಯಿಂದ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಚಿಕ್ಕಮಗಳೂರು ನಗರದ ಹೊರವಲಯದ ತೇಗೂರು ಎಂಬ ಗ್ರಾಮದಲ್ಲಿ ನಡೆದಿದೆ.

ವಿನೋದ್‌ (24) ಎಂಬಾತನೇ ಈ ಆತ್ಮಹತ್ಯೆಗೈದ ಯುವಕ. ಈತ ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಿಸದ ಕಾರಣ ಮೃತ ಹೊಂದಿದ್ದಾರೆ.

ಇದನ್ನೂ ಓದಿ: Biscuit Row: ನಾಯಿ ತಿನ್ನದ ಬಿಸ್ಕೆಟ್‌ ಕಾರ್ಯಕರ್ತನಿಗೆ ನೀಡಿದ ರಾಹುಲ್;‌ ಕಾರ್ಯಕರ್ತರಿಗೆ ಮಾಡಿದ ಅಪಮಾನವೆಂದ ಬಿಜೆಪಿ, ವೀಡಿಯೋ ವೈರಲ್‌

ತೇಗೂರು ಗ್ರಾಮದ ತನುಜಾ ಎಂಬ ಯುವತಿಯನ್ನು ವಿನೋದ್‌ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ. ಇವರಿಬ್ಬರ ಪ್ರೀತಿಗೆ ಯುವತಿ ಮನೆಯವರ ಒಪ್ಪಿಗೆ ಇರಲಿಲ್ಲ. ಹೀಗಾಗಿ ಯುವತಿ ಮನೆಯವರ ವಿರೋಧದ ನಡುವೆ ಇಬ್ಬರೂ ಓಡಿ ಹೋಗಿ ಮದುವೆಯಾಗಿದ್ದರು. ಇವರಿಬ್ಬರು ಡಿ.10 ರಂದು ಮದುವೆಯಾಗಿದ್ದರು. ಆದರೆ ಪೊಲೀಸರು ಈ ನವಜೋಡಿಯನ್ನು ಠಾಣೆಗೆ ಕರೆಸಿದ್ದರು. ಯುವತಿಯ ಕುಟುಂಬಸ್ಥರ ದೂರಿನ ಮೇರೆಗೆ ಠಾಣೆಯಲ್ಲಿ ಪಂಚಾಯಿತಿ ನಡೆದಿದ್ದು ಯುವತಿ ತನ್ನ ತಾಯಿ ಜೊತೆ ಮನೆಗೆ ಹೋಗುವುದಾಗಿ ಹೇಳಿಕೆ ನೀಡಿದ್ದಳು

ಮದುವೆಯಾದ ಮೂರೇ ದಿನ ಗಂಡನನ್ನು ಬಿಟ್ಟು ತಾಯಿ ಜೊತೆ ಹೋಗುವುದಾಗಿ ಯುವತಿ ಹೇಳಿಕೆ ನೀಡಿ ಉಲ್ಟಾ ಹೊಡೆದಿದ್ದಳು. ಇದರಿಂದ ಮನನನೊಂದ ಯುವಕ ಆತ್ಮಹತ್ಯೆಗೆ ಯತ್ನಿಸಿ, ಸಾವಿಗೀಡಾಗಿದ್ದಾನೆ.

You may also like

Leave a Comment