Home » Sullia: ಮಾರಿಷಸ್‌ನಲ್ಲಿ ಕಲಿಯುತ್ತಿದ್ದ ಸುಳ್ಯದ ಯುವಕ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತ

Sullia: ಮಾರಿಷಸ್‌ನಲ್ಲಿ ಕಲಿಯುತ್ತಿದ್ದ ಸುಳ್ಯದ ಯುವಕ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಮೃತ

0 comments

Sullia: ಮಾರಿಷಸ್‌ನಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಳ್ಯದ ಯುವಕನೋರ್ವ ಜಲಪಾತದಲ್ಲಿ ಕಾಲು ಜಾರಿ ಬಿದ್ದು ಸಾವಿಗೀಡಾಗಿರುವ ಕುರಿತು ವರದಿಯಾಗಿದೆ. ನಾಲ್ಕೂರು ಗ್ರಾಮದ ಕಲ್ಲಾಜೆಯ ಜಯಲಕ್ಷ್ಮಿ ಭಟ್‌ ಅವರ ಪುತ್ರ ನಂದನ್‌ ಭಟ್‌ (26) ಮೃತ ಯುವಕ.

ನಂದನ್‌ ಎಸ್‌.ಭಟ್‌ ಅವರು ಮಾರಿಷಸ್‌ನಲ್ಲಿ ವಿದ್ಯಾರ್ಥಿ ವೀಸಾದಲ್ಲಿದ್ದು, ಅಲ್ಲಿ ಅಧ್ಯಯನ ಮಾಡುತ್ತಿದ್ದರು. ನಿನ್ನೆ ಜಲಪಾತ ವೀಕ್ಷಣೆಗೆಂದು ಹೋಗಿದ್ದ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಊರಿಗೆ ತರಲು ಇಬ್ಬರು ಸಂಸದರು ಮಧ್ಯ ಪ್ರವೇಶಿಸಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

You may also like