Home » Tamilnadu: ಪ್ರೇಯಸಿಯಿಂದ ಲೈಂಗಿಕ ಕ್ರಿಯೆಗೆ ನಿರಾಕರಣೆ; ಆಕೆಯ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಪ್ರಿಯಕರ!

Tamilnadu: ಪ್ರೇಯಸಿಯಿಂದ ಲೈಂಗಿಕ ಕ್ರಿಯೆಗೆ ನಿರಾಕರಣೆ; ಆಕೆಯ ಮಗುವಿನ ಮೇಲೆ ಅತ್ಯಾಚಾರ ಮಾಡಿದ ಪ್ರಿಯಕರ!

0 comments
Crime

Tamilnadu: ತನ್ನ ಪ್ರಿಯತಮೆ ಲೈಂಗಿಕ ಕ್ರಿಯೆಗೆ ಒಪ್ಪಿಲ್ಲ ಎನ್ನುವ ಕಾರಣಕ್ಕೆ ಕೋಪಗೊಂಡ ವ್ಯಕ್ತಿ ಪ್ರೇಯಸಿಯ ಒಂದೂವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ ನಡೆಸಿರುವ ಘಟನೆ ತಮಿಳುನಾಡಿನ ನಮಕ್ಕಲ್‌ ಜಿಲ್ಲೆಯಲ್ಲಿ ನಡೆದಿದೆ.

ಎಪ್ರಿಲ್‌ 6 ರಂದು ಈ ಘಟನೆ ನಡೆದಿದ್ದು, ಆರೋಪಿಯನ್ನು ಒಡಿಶಾ ಮೂಲದ ವಲಸೆ ಕಾರ್ಮಿಕ ಎಂದು ಗುರುತಿಸಲಾಗಿದೆ.

ಮಹಿಳೆ ತನ್ನ ಗಂಡನನ್ನು ತೊರೆದು ಮಕ್ಕಳೊಂದಿಗೆ ಆರೋಪಿಯ ಜೊತೆ ವಾಸ ಮಾಡುತ್ತಿದ್ದಳು ಎನ್ನಲಾಗಿದೆ.

ಮಹಿಳೆ ಲೈಂಗಿಕ ಕ್ರಿಯೆಗೆ ಒಪ್ಪಿಲ್ಲ ಎನ್ನುವ ಕಾರಣಕ್ಕೆ ಕೋಪದಿಂದ ಆಕೆಯ ಒಂದೂವರೆ ವರ್ಷದ ಮಗುವನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದು, ಅತ್ಯಾಚಾರ ಮಾಡಿರುವ ಕುರಿತು ಮಹಿಳೆ ಆರೋಪ ಮಾಡಿದ್ದಾರೆ. ಮಗಳ ಗುಪ್ತಾಂಗದಲ್ಲಿ ರಕ್ತ ಒಸರುವುದನ್ನು ಕಂಡು ಮಹಿಳೆ ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾಳೆ.

ಪೊಲೀಸರಿಗೆ ವೈದ್ಯರು ಮಾಹಿತಿ ನೀಡಿದ್ದು, ಆರೋಪಿಯ ಬಂಧನವಾಗಿದ್ದು, ಸೇಲಂ ಕೇಂದ್ರ ಕಾರಾಗೃಹದಲ್ಲಿರಿಸಲಾಗಿದೆ.

You may also like