4
Telangana: ತಡರಾತ್ರಿ ಮಟನ್ ಸಾಂಬಾರ್ ಮಾಡಲು ನಿರಾಕರಣೆ ಮಾಡಿದ ಪತ್ನಿಯನ್ನು ಪತಿ ಕ್ರೂರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ನಡೆದಿದೆ.
ಮಾಲೋತ್ ಕಲಾವತಿ (35) ಕೊಲೆಯಾದ ಪತ್ನಿ.
ಕಲಾವತಿ ಬಳಿ ಪತಿ ತಡರಾತ್ರಿ ಮಟನ್ ಸಾಂಬಾರು ಮಾಡಲು ಹೇಳಿದ್ದಾನೆ. ಇದಕ್ಕೆ ಪತ್ನಿ ನಿರಾಕರಣ ಮಾಡಿದ್ದು, ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ. ಯಾರೂ ಇಲ್ಲದಿದ್ದಾಗ ಈ ಜಗಳ ನಡೆದಿದೆ. ಕ್ರೂರವಾಗಿ ಪತಿ ಪತ್ನಿ ಮೇಲೆ ಹಲ್ಲೆ ಮಾಡಿ ಕೊಂದಿದ್ದಾನೆ ಎಂದು ಕಲಾವತಿ ತಾಯಿ ಆರೋಪ ಮಾಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ.
