4
Brutal Murder: ಬೀದರ್‌ನಲ್ಲಿ ಮಗು ಎದುರೇ ಕತ್ತು ಸೀಳಿ ದಂಪತಿಯ ಬರ್ಬರ ಹತ್ಯೆ ನಡೆದಿದೆ. ಬೀದರ್ ಜಿಲ್ಲೆಯ ಬಸವ ಕಲ್ಯಾಣ ತಾಲೂಕಿನ ಜಾಫರವಾಡಿ ಗ್ರಾಮದ ಬಳಿ ನಡೆದಿದೆ.
ಮೃತರನ್ನು ಜಾಫರವಾಡಿ ಗ್ರಾಮದ ರಾಜು (28) ಹಾಗೂ ಪತ್ನಿ ಶಾರಿಕಾ ಕೊಳಸುರೆ (24) ಎಂದು ಗುರುತಿಸಲಾಗಿದೆ.
ತಮ್ಮ 2ವರ್ಷದ ಮಗುವಿನ ಎದುರೇ ದಂಪತಿಯನ್ನು ಆರೋಪಿಗಳು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಅನೈತಿಕ ಸಂಬಂಧದ ಕಾರಣದಿಂದ ಈ ಕೊಲೆ ನಡೆದಿದೆ ಎನ್ನಲಾಗಿದೆ.
ಮಹಿಳೆ ಜೊತೆ ರಾಜು ಅನೈತಿಕ ಸಂಬಂಧ ಹೊಂದಿದ್ದ ಎನ್ನಲಾಗಿದ್ದು, ಯುವತಿ ಕಡೆಯವರು ದಂಪತಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ದತ್ತಾತ್ರೇಯ ಹಾಗೂ ತುಕಾರಾಮ್ ಬಂಧಿತರು.
ದತ್ತಾತ್ರೇಯ ತಂಗಿ ಜೊತೆ ರಾಜು ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಮಂಠಾಳ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
