8
Davanagere: ಹಕ್ಕಿಪಿಕ್ಕಿ ಜನಾಂಗದ ಅಪ್ರಾಪ್ತ ಬಾಲಕನನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಬೆತ್ತಲೆ ಮಾಡಿ ಕಟ್ಟಿ ಹಾಕಿ ಆತನ ಮೇಲೆ ಕೆಂಪಿರುವೆ ಬಿಟ್ಟು ಚಿತ್ರಹಿಂಸೆ ನೀಡಿರುವ ಭೀಕರ ಘಟನೆ ಚೆನ್ನಗಿರಿ ತಾಲೂಕಿನ ಅಸ್ತಾಪನಹಳ್ಳಿಯಲ್ಲಿ ನಡೆದಿದೆ.
ಈ ಘಟನೆಯ ವಿಡಿಯೋ ಇದೀಗ ಬೆಳಕಿಗೆ ಬಂದಿದೆ. ಬಾಲಕ ಸದ್ಯಕ್ಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಜನರಿಂದ ಆರೋಪಿಗಳ ಮೇಲೆ ಆಕ್ರೋಶ ವ್ಯಕ್ತವಾಗಿದೆ.
ಸರಿ ಸುಮಾರು 10-15 ಯುವಕರು ಬಾಲಕನಿಗೆ ತೋಟದಲ್ಲಿ ದೊಣ್ಣೆ, ಡ್ರಿಪ್ ಪೈಪ್ ಸೇರಿ ಸಿಕ್ಕ ಸಿಕ್ಕ ವಸ್ತುಗಳಿಂದ ಥಳಿಸಿದ್ದಾರೆ. ನಂತರ ಆತನನ್ನು ಬೆತ್ತಲೆ ಮಾಡಿ ಮರಕ್ಕೆ ಕಟ್ಟಿ ಹಾಕಿದ್ದಾರೆ. ಬಾಲಕ ಬೊಬ್ಬಿಡುತ್ತಿದ್ದರೂ ಆತನನ್ನು ಬಿಡದೆ ಕೆಂಪಿರುವೆ ಬಿಟ್ಟು ತಮ್ಮ ವಿಕೃತಿ ಮೆರೆದಿದ್ದಾರೆ.
ಬಾಲಕ ಪದೇ ಪದೇ ಕಳವು ನಡೆಸುತ್ತಿದ್ದ ಎನ್ನುವ ಆರೋಪವಿತ್ತು. ಹೀಗಾಗಿ ಈತನಿಗೆ ಪಾಠ ಕಲಿಸಲು ಈ ರೀತಿಯ ದುಷ್ಕೃತ್ಯ ಮಾಡಿದ್ದಾರೆನ್ನಲಾಗಿದೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
