Home » Crime: ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿ ಹೂತು ಹಾಕಿರುವ ಗೆಳೆಯ! ಕೊನೆಗೂ ಬಯಲಾದ ಸತ್ಯ!

Crime: ಗರ್ಭಿಣಿ ಪ್ರೇಯಸಿಯನ್ನು ಹತ್ಯೆ ಮಾಡಿ ಹೂತು ಹಾಕಿರುವ ಗೆಳೆಯ! ಕೊನೆಗೂ ಬಯಲಾದ ಸತ್ಯ!

1 comment

Crime: ಹತ್ತೊಂಬತ್ತು ವರ್ಷದ ಗರ್ಭಿಣಿ ಪ್ರೇಯಸಿ ಮದುವೆಯಾಗುವಂತೆ ಒತ್ತಾಯಿಸಿದ ಹಿನ್ನೆಲೆ ಆಕೆಯ ಪ್ರೇಮಿ ಹತ್ಯೆ ಮಾಡಿ ಹೂತು ಹಾಕಿರುವ ಘಟನೆ (Crime) ಹರಿಯಾಣದ (Haryana) ರೊಹ್ಟಕ್‌ನಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದ ಯುವತಿ ಆರು ಸಾವಿರಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಳು. ತನ್ನ ಗೆಳೆಯನೊಂದಿಗಿನ ಚಿತ್ರಗಳು ಮತ್ತು ವೀಡಿಯೊಗಳನ್ನು ನಿರಂತರವಾಗಿ ಪೋಸ್ಟ್ ಮಾಡುತ್ತಿದ್ದಳು.

ಮೃತ ಯುವತಿ ಹಾಗೂ ಗೆಳೆಯ ಸಂಜು ಸಲೀಮ್ ಪರಸ್ಪರ ಸಂಬಂಧ ಹೊಂದಿದ್ದರು. ಪರಸ್ಪರ ಒಪ್ಪಿಗೆಯೊಂದಿಗೆ ಸಂಬಂಧದಲ್ಲಿದ್ದ ಯುವತಿ ಏಳು ತಿಂಗಳ ಗರ್ಭಿಣಿಯಾಗಿದ್ದಳು. ತನ್ನ ಗೆಳೆಯನನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಆದರೆ ಇದಕ್ಕೆ ಸಿದ್ಧನಿಲ್ಲದ ಸಂಜು ಸಲೀಮ್ ಅವಳನ್ನು ಗರ್ಭಪಾತ ಮಾಡಬೇಕೆಂದು ಹಠ ಹಿಡಿದಿದ್ದು, ಈ ವಿಚಾರವಾಗಿ ಇಬ್ಬರ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು ಆದ್ರೆ ಆಕೆ ಅದನ್ನು ಒಪ್ಪಲಿಲ್ಲ.

ಇದರಿಂದ ಮನನೊಂದ ಯುವತಿ ಸೋಮವಾರ ದೆಹಲಿಯ ತನ್ನ ಮನೆಯಿಂದ ಕೆಲ ವಸ್ತುಗಳನ್ನು ತೆಗೆದುಕೊಂಡು ಆರೋಪಿಯನ್ನು ಭೇಟಿಯಾಗಿ ಹೇಗಾದರೂ ಮದುವೆಗೆ ಒಪ್ಪಿಸಬೇಕು ಎಂದು ರೊಹ್ಟಕ್‌ಗೆ ತೆರಳಿದ್ದಳು. ಆದರೆ ಮರಳಿ ಬಂದಿರಲಿಲ್ಲ. ಈ ಹಿನ್ನೆಲೆ ಆಕೆಯ ಪೊಷಕರು ಅ.23 ರಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಬಳಿಕ ಯುವತಿಯ ಗೆಳೆಯನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ.

ಆರೋಪಿಯು ಕೊಲೆಗೆ ಪೂರ್ವಯೋಜಿತವಾಗಿ ತನ್ನ ಸ್ನೇಹಿತರಾದ ರಿತಿಕ್ ಮತ್ತು ಪಂಕಜ್ ಅವರನ್ನು ಅಪರಾಧದಲ್ಲಿ ತೊಡಗಿಸಿಕೊಂಡಿದ್ದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಮಾಡಲು ಕರ್ವಾ ಚೌತ್ ದಿನದಂದು ಕಾರನ್ನು ಬಾಡಿಗೆಗೆ ಪಡೆದು ನಂಗ್ಲೋಯ್‌ನಿಂದ ಯುವತಿಯನ್ನು ರೋಹ್ಟಕ್‌ಗೆ ಕರೆದೊಯ್ದು, ಅಲ್ಲಿ ಅವಳನ್ನು ಕತ್ತು ಹಿಸುಕಿ ಹತ್ಯೆ ಮಾಡಿ, ಅದೇ ರಾತ್ರಿ ರೋಹ್ಟಕ್‌ನ ಕಾಡುಗಳಲ್ಲಿ ಅವಳ ದೇಹವನ್ನು ಹೂತುಹಾಕಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ. ಪೊಲೀಸರು ಸಲೀಂ ಮತ್ತು ಆತನ ಸಹಚರರಲ್ಲಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ತಲೆಮರೆಸಿಕೊಂಡಿದ್ದಾನೆ.

You may also like

Leave a Comment