Home » ಮಗಳ ಜೊತೆ ಮಾತಾಡಿದ್ದಕ್ಕೆ ಯುವಕನ ಮೇಲೆ ಚಾಕುವಿನಿಂದ ಮನಬಂದಂತೆ ಚುಚ್ಚಿದ ತಂದೆ

ಮಗಳ ಜೊತೆ ಮಾತಾಡಿದ್ದಕ್ಕೆ ಯುವಕನ ಮೇಲೆ ಚಾಕುವಿನಿಂದ ಮನಬಂದಂತೆ ಚುಚ್ಚಿದ ತಂದೆ

0 comments

ತಂದೆಯೋರ್ವ ತನ್ನ ಮಗಳ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಎನ್ನುವ ಕಾರಣಕ್ಕೆ 17ರ ಹರೆಯದ ಯುವಕನ ಮೇಲೆ ಮನಬಂದಂತೆ ಚಾಕುವಿನಿಂದ ಇರಿದಿರುವ ಘಟನೆಯೊಂದು ಫೆ.10 ರಂದು ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ಹಲ್ಲೆಗೆ ಒಳಗಾದ ಯುವಕನನ್ನು ಶಿಕ್ಷಕರು ಕೌನ್ಸಿಲಿಂಗ್‌ಗೆ ಕರೆದಿದ್ದು, ಅವರ ಜೊತೆ ಬಾಲಕಿಯ ತಂದೆ ಜಗದೀಶ್‌ ರಚಾಡ್‌ ಕೂಡಾ ಕುಳಿತಿದ್ದರು. ಕೂಡಲೇ ಮಾತುಕತೆ ನಡೆಯುವ ಸಂದರ್ಭದಲ್ಲೇ ಜಗದೀಶ್‌ ರಚಾಡ್‌ ಚಾಕುವಿನಿಂದ ಹಲವು ಬಾರಿ ಯುವಕನಿಗೆ ಇರಿದಿದ್ದಾರೆ. ಏನಾಗ್ತಿದೆ ಎಂದು ನೋಡುವಷ್ಟರಲ್ಲಿ ಹುಡುಗ ಭೀಕರವಾಗಿ ಗಾಯಗೊಂಡು ನೆಲಕ್ಕೆ ಬಿದ್ದಿದ್ದ. ಕೂಡಲೇ ಅಲ್ಲಿದ್ದ ಸಿಬ್ಬಂದಿ ಜಗದೀಶ್‌ನನ್ನು ತಡೆದು ಆಚೆ ಕರೆದುಕೊಂಡು ಹೋಗಿದ್ದು, ಮಗಳ ಜೊತೆ ಫೋನ್‌ನಲ್ಲಿ ಮಾತನಾಡುತ್ತಿದ್ದ ಎನ್ನುವ ಕಾರಣಕ್ಕೆ ಭೀಕರವಾಗಿ ಹಲ್ಲೆ ಮಾಡಿದ್ದಾನೆ. ಅಷ್ಟು ಮಾತ್ರವಲ್ಲ ಇನ್ನು ನನ್ನ ಮಗಳ ಜೊತೆ ನೀನು ಮೊಬೈಲ್‌ನಲ್ಲಿ ಮಾತನಾಡುವಂತಿಲ್ಲ ಎಂದು ಗುಡುಗಿದ್ದಾನೆ.

ಘಟನೆ ನಡೆದ ನಂತರ ಸಂಸ್ಥೆಯ ಸಿಬ್ಬಂದಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

You may also like