Home » Udupi: ಲಿಂಕ್ ಕ್ಲಿಕ್ ಮಾಡಿ ಲಕ್ಷಗಟ್ಟಲೆ ಕಳೆದುಕೊಂಡ ವ್ಯಕ್ತಿ!!

Udupi: ಲಿಂಕ್ ಕ್ಲಿಕ್ ಮಾಡಿ ಲಕ್ಷಗಟ್ಟಲೆ ಕಳೆದುಕೊಂಡ ವ್ಯಕ್ತಿ!!

0 comments

Udupi: ಸೈಬರ್ ವಂಚನೆ ಜಾಲ ದಿನದಿಂದ ದಿನಕ್ಕೆ ಹರಡುತ್ತಲೇ ಇದೆ. ಹೊಸ ಹೊಸ ಮಾರ್ಗಗಳನ್ನು ಸೃಷ್ಟಿಸಿ ವಂಚಕರು ಅಮಾಯಕರಿಂದ ಹಣವನ್ನು ದೋಚುತಿದ್ದಾರೆ. ಅಂತೆಯೇ ಇದೀಗ ಉಡುಪಿಯಲ್ಲಿ ಒಂದು ಇದೇ ರೀತಿ ಪ್ರಕರಣ ಬೆಳಕಿಗೆ ಬಂದಿದ್ದು ಲಿಂಕ್ ಒಂದನ್ನು ಕ್ಲಿಕ್ ಮಾಡಿ ವ್ಯಕ್ತಿಯೊಬ್ಬರು ಲಕ್ಷಗಟ್ಟಲೆ ಹಣವನ್ನು ಕಳೆದುಕೊಂಡಿದ್ದಾರೆ.

ಹೌದು, ಇ-ಮೇಲ್ ಗೆ ಬಂದಂತಹ ಲಿಂಕೊಂದನ್ನು ಕ್ಲಿಕ್ ಮಾಡಿ ಉಡುಪಿಯ ದಿಲೀಪ್ ಎಂಬುವರು ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೂ ಅಧಿಕ ಮೊತ್ತವನ್ನು ಕಳೆದುಕೊಂಡಿದ್ದಾರೆ. ನೆಟ್‌ಫ್ಲಿಕ್ಸ್‌ನ ಚಂದಾ ಮುಗಿದುಹೋಗಿರುವ ಬಗ್ಗೆ ಉಡುಪಿಯ ದಿಲೀಪ್‌ ಅವರ -ಮೇಲ್‌ಗೆ ಎ.2ರಂದು ಸಂದೇಶ ಬಂದಿತ್ತು. ಲಿಂಕ್‌ ಮೇಲೆ ಕ್ಲಿಕ್‌ ಮಾಡಿದಾಗ ಚಂದಾ ಪಡೆಯಲು ಕ್ರೆಡಿಟ್‌ ಕಾರ್ಡ್‌ ಮಾಹಿತಿ ಪಡೆಯಲು ಇನ್ನೊಂದು ಟ್ಯಾಬ್‌ ತೆರೆದಿದೆ. ಈ ವೇಳೆ ಅವರು ಐಸಿಐಸಿಐ ಕ್ರೆಡಿಟ್‌ ಕಾರ್ಡ್‌ ಸಂಖ್ಯೆ ನೀಡಿದಾಗ ಅವರ ಮೊಬೈಲ್‌ಗೆ ಒಟಿಪಿ ಬಂದಿದ್ದು, ಅದನ್ನು ನಮೂದಿಸಿದ್ದಾರೆ.

ಬಳಿಕ “ಸಮ್‌ಥಿಂಗ್‌ ವೆಂಟ್‌ ರಾಂಗ್‌’ ಎಂಬ ಸಂದೇಶ ಬಂದಿದೆ. ಪುನಃ ಮೊಬೈಲ್‌ಗೆ ಮತ್ತೊಂದು ಒಟಿಪಿ ಬಂದಿತ್ತು. ಈ ವೇಳೆ ದಿಲೀಪ್‌ಗೆ ಸಂದೇಹ ಬಂದಿದ್ದು, ಐಸಿಐಸಿಐ ಬ್ಯಾಂಕ್‌ನ ಹೆಲ್ಪ್‌ಲೈನ್ ಗೆ ಕರೆ ಮಾಡಿದಾಗ ಅವರ ಖಾತೆಯಿಂದ 1,29,944 ರೂ. ಅನಾಮಧೇಯ ವ್ಯಕ್ತಿಯ ಖಾತೆಗೆ ವರ್ಗಾವಣೆಯಾಗಿರುವುದು ತಿಳಿಯಿತು. ಬಳಿಕ ಅವರು ದೂರು ದಾಖಲಿಸಿದ್ದಾರೆ.

You may also like