ಹುಬ್ಬಳ್ಳಿ: ಕೆಳಜಾತಿ ಯುವಕನೊಂದಿಗೆ ಮದುವೆಯಾದ ಏಳು ತಿಂಗಳ ಗರ್ಭಿಣಿ ಯನ್ನು ಆಕೆಯ ಕುಂಟುಂಬಸ್ಥರೇ ಮಾರ ಕಾಸ್ತ್ರಗಳಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ತಾಲೂಕಿನ ಇನಾಂಇರಾಪುರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಮಾನ್ಯಾ ಪಾಟೀಲ್ ಕುಟುಂಬಸ್ಥರ ವಿರೋಧದ ಮಧ್ಯೆಯೂ ವಿವೇಕಾನಂದ ದೊಡ್ಡಮನಿ ಜೊತೆ ಏಳು ತಿಂಗಳ ಹಿಂದೆ ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿಯೇ ಮದುವೆ ಆಗಿದ್ದರು.
ತವರು ಮನೆಯವರ ನಂತರ ಹಿನ್ನೆಲೆಯಲ್ಲಿ ಯುವಕನ ಕುಟುಂಬದ ಜೊತೆ ಹಗೆ ಸಾಧಿಸುತ್ತಿದ್ದ ಮಾನ್ಯಾ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕನ ತಂದೆ ಮರಿಯಪ್ಪ ಮೇಲೆ ಟ್ಯಾಕ್ಟರ್ ಹರಿಸಿ ಕೊಲೆಗೆ ಯತ್ನಿಸಿದ್ದಾರೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರಿಂದ ಅವರ ಕಾಲಿಗೆ ಪೆಟ್ಟು ಬಿದ್ದಿದೆ. ಯುವಕ ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಇನ್ನೊಂದೆಡೆ ಇದೇ ತಂಡದ 15-20 ಜನರು ಯುವಕನ ಮನೆಗೆ ನುಗ್ಗಿ ಆತನ ಹೆಂಡತಿ ಮಾನ್ಯಾಗೆ ಕೊಡಲಿಯಿಂದ ಕುತ್ತಿಗೆಗೆ ಹೊಡೆದಿದ್ದಾರೆ.
ಅಲ್ಲದೇ ಯುವಕನ ತಾಯಿ ರೇಣುಕವ್ವ, ಸಹೋದರರು ಮತ್ತು ಚಿಕ್ಕಮ್ಮ ಮೇಲೂ ಹಲ್ಲೆ ನಡೆಸಿದ್ದಾರೆ. ಮರಿಯಪ್ಪ ಮತ್ತು ರೇಣುಕದ್ದ ಸ್ಥಿತಿ ಚಿಂತಾಜನಕವಾಗಿದೆ.
ಮೂವರು ವಶಕ್ಕೆ: “ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಾಶಗೌಡ ಪಾಟೀಲ್, ವೀರನಗೌಡ ಪಾಟೀಲ್ ಮತ್ತು ಅರುಣ ಗೌಡ ಪಾಟೀಲ್ ಅವರನ್ನು ವಶಕ್ಕೆ ಪಡೆಯ ಲಾಗಿದೆ,” ಎಂದು ಧಾರವಾಡ ಎಸ್ಪಿ ಗುಂಜನ್ ಆರ್ಯ ತಿಳಿಸಿದ್ದಾರೆ.
