Home » Mangaluru: ಕಾವೂರು ಜಂಕ್ಷನ್‌ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರ ಬಂಧನ!

Mangaluru: ಕಾವೂರು ಜಂಕ್ಷನ್‌ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರ ಬಂಧನ!

0 comments
Crime News Bangalore

Mangaluru: ಕಾವೂರು ಜಂಕ್ಷನ್‌ ಬಳಿ ಮಂಗಳವಾರ ರಾತ್ರಿ 12.30 ರ ಸುಮಾರಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮೂವರನ್ನು ಕಾವೂರು ಪೊಲೀಸರು ಬಂಧನ ಮಾಡಿದ್ದಾರೆ.

ಫರಂಗಿಪೇಟೆ ನಿವಾಸಿ ಮಹಮ್ಮದ್‌ ಫಾಜ್‌ (24), ಕೇರಳ ತ್ರಿಶ್ಯೂರಿನ ಅರಟ್ಟುಪರಂಬಿಲ್‌ ನಿವಾಸಿ ಶರೀಫ್‌ ಎ ಎಸ್‌ (25) ಮತ್ತು ಸುಳ್ಯ ತಾಲೂಕಿನ ಗಾಂಧೀನಗರ ನಿವಾಸಿ ಮಹಮ್ಮದ್‌ ಅಶ್ರಫ್‌ (24) ಬಂಧಿತರು.

ಸ್ಥಳಕ್ಕೆ ಬಂದ ಪೊಲೀಸರನ್ನು ಕಂಡು ಓಡಲು ಯತ್ನ ಮಾಡಿದ್ದು, ಪೊಲೀಸ್‌ ಸಿಬ್ಬಂದಿ ಸುತ್ತುವರಿದು ಹಿಡಿದು ವಿಚಾರಣೆ ನಡೆಸಿದ್ದಾರೆ. ಬಂಧಿತರಲ್ಲಿ ಮಹಮ್ಮದ್‌ ಫಾಜ್‌ ಮಾದಕ ವಸ್ತು ಸೇವಿಸಿದಂತೆ ಕಂಡು ಬಂದಿದ್ದ. ಮೂವರನ್ನೂ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಹಮ್ಮದ್‌ ಫಾಜ್‌ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿದೆ. ಎನ್‌ಡಿಪಿಎಸ್‌ ಕಾಯ್ದೆ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ.

You may also like