Home » Triple Talaq: ಬಿಜೆಪಿಗೆ ಮತ ನೀಡಿದ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ

Triple Talaq: ಬಿಜೆಪಿಗೆ ಮತ ನೀಡಿದ ಪತ್ನಿಗೆ ತ್ರಿವಳಿ ತಲಾಖ್‌ ನೀಡಿದ ಪತಿ

0 comments
Triple Talaq

Triple Talaq: ಗಂಡ ಹೆಂಡತಿಯ ಮಧ್ಯೆ ಏನೇನೋ ಕಾರಣಕ್ಕೆ ಡಿವೋರ್ಸ್‌ ಆಗಿರುವುದನ್ನು ನೀವು ಕೇಳಿರಬಹುದು, ಓದಿರಬಹುದು. ಆದರೆ ಇಲ್ಲೊಂದು ಕಡೆ ಪತ್ನಿ ಬಿಜೆಪಿಯನ್ನು ಬೆಂಬಲಿಸಿದ್ದಾಳೆ ಎಂಬ ಒಂದೇ ಒಂದು ಕಾರಣಕ್ಕೆ ಪತಿ ತ್ರಿವಳಿ ತಲಾಖ್‌ ನೀಡಿದ ಘಟನೆಯೊಂದು ನಡೆದಿದೆ.

Gruhalakshmi Scheme: ಇನ್ಮುಂದೆ ಈ ದಿನಾಂಕದಂದು ಕರೆಕ್ಟ್ ಆಗಿ ಖಾತೆಗೆ ಜಮಾ ಆಗುತ್ತೆ ಗೃಹಲಕ್ಷ್ಮೀ ದುಡ್ಡು !!

ಇಂತಹ ಒಂದು ವಿಲಕ್ಷಣ ಘಟನೆ ನಡೆದಿರುವುದು ಮಧ್ಯಪ್ರದೇಶದಲ್ಲಿ.

ಆದರೆ ಪತಿ ಈ ಆರೋಪವನ್ನು ಅಲ್ಲಗೆಳೆದಿದ್ದು, ತನ್ನ ಪತ್ನಿಗೆ ಅಕ್ರಮ ಸಂಬಂಧಗಳಿದೆ ಎಂದು ಹೇಳಿದ್ದಾರೆ.

ಇವರಿಬ್ಬರ ಮದುವೆ ಎಂಟು ವರ್ಷಗಳ ಹಿಂದೆ ನಡೆದಿದ್ದು, ಚೆನ್ನಾಗಿಯೇ ಇದ್ದ ಸಂಸಾರದಲ್ಲಿ ಇತ್ತೀಚೆಗೆ ಗಲಾಟೆ ಪ್ರಾರಂಭವಗಿದ್ದು ಈಕೆಯನ್ನು ಅತ್ತೆ, ನಾದಿನಿ ಸೇರಿ ಮನೆಯಿಂದ ಹೊರ ಹಾಕಿದ್ದು, ಈಕೆ ಒಂದೂವರೆ ವರ್ಷದಿಂದ ಮನೆಯಲ್ಲಿ ಇಲ್ಲ ಎನ್ನಲಾಗಿದೆ.

ದೂರಿನಲ್ಲಿ ಮಹಿಳೆ ತಾನು ಪಕ್ಷವೊಂದನ್ನು ಬೆಂಬಲಿಸಿದ್ದಕ್ಕೆ ಹಾಗೂ ಮತ ಹಾಕಿದ್ದಕ್ಕೆ ಪತಿಗೆ ಅದು ಇಷ್ಟವಾಗದೇ ವಿಚ್ಛೇದನ ಕೋರಿರುವುದಾಗಿ ಹೇಳಲಾಗಿದೆ. ಸಂತ್ರಸ್ತೆಯ ಪತಿ, ಅತ್ತೆ, ಹಾಗೂ ನಾಲ್ಕು ನಾದಿನಿಯರ ವಿರುದ್ಧ ಇದೀಗ ದೂರಿನನ್ವಯ ಪ್ರಕರಣ ದಾಖಲು ಮಾಡಲಾಗಿದೆ.

ಈಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ಅನ್ಯರೊಂದಿಗೆ ಸಂಬಂಧ ಹೊಂದಿದ್ದು, ಮಕ್ಕಳ ಒಳಿತಿಗಾಗಿ ತನ್ನ ಅಭ್ಯಾಸವನ್ನು ಬಿಡಲು ಹೇಳಿದ್ದೆ. ನಂತರ ನಾನು ಮುಸ್ಲಿಂ ಕಾನೂನಿನ ಪ್ರಕಾರ 2022 ಮಾ.30 ರಲ್ಲಿ ಮೊದಲ ಹಾಗೂ 2023 ರ ಅಕ್ಟೋಬರ್‌ ಮತ್ತು ನವೆಂಬರ್‌ಗಳಲ್ಲಿ ಎರಡು ತಲಾಕ್‌ ನೀಡಿದ್ದೇನೆ ಎಂದು ಪತಿ ದೂರಿದ್ದಾನೆ.

Kasaragod: ಹಿಟಾಚಿ ಮಗುಚಿ ಬಿದ್ದು ಯುವಕ ದಾರುಣ ಸಾವು

 

You may also like

Leave a Comment