Home » Tungabhadra Dam: ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ!

Tungabhadra Dam: ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಭಾರೀ ಬೆಂಕಿ!

0 comments

Tungabhadra Dam: ಬಿಸಿಲಿನ ಕಾರಣದಿಂದ ತುಂಗಭದ್ರಾ ಡ್ಯಾಂ ಬಳಿಯ ಗುಡ್ಡದಲ್ಲಿ ಬುಧವಾರ ಸಂಜೆ ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದೆ.

ವಿಜಯನಗರ ಜಿಲ್ಲೆಯ ಹೊಸಪೇಟೆಯ ರಾ.ಹೆ.50 ರ ಪಕ್ಕದಲ್ಲಿಯೋ ಟಿಬಿ ಡ್ಯಾಂ ಬಳಿಯ ಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಗುಡ್ಡ ಧಗಧಗನೆ ಉರಿಯುತ್ತಿರುವ ದೃಶ್ಯ ವೈರಲ್‌ ಆಗಿದೆ.

ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದು, ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಯಾರೊ ಕಿಡಿಗೇಡಿಗಳು ಬೆಂಕಿ ಹಚ್ಚಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

You may also like