Home » Dog Bite: ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ : ಮಗುವಿಗೆ, ಮಹಿಳೆಗೆ ಕಚ್ಚಿ ಗಂಭೀರ ಗಾಯ

Dog Bite: ಪೊನ್ನಂಪೇಟೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ : ಮಗುವಿಗೆ, ಮಹಿಳೆಗೆ ಕಚ್ಚಿ ಗಂಭೀರ ಗಾಯ

0 comments

Dog Bite: ಪೊನ್ನಂಪೇಟೆಯಲ್ಲಿ ಬೆಳಿಗ್ಗೆ ಅಂಗನವಾಡಿಗೆ ತೆರಳುತ್ತಿದ್ದ ಮಗುವಿಗೆ ಬೀದಿ ನಾಯಿಯೊಂದು ಕಚ್ಚಿ ಗಾಯಗೊಳಿಸಿದ ಘಟನೆ ಬೆನ್ನಲ್ಲೇ ಇದೀಗ ಮತ್ತೊಂದು ಘಟನೆ ನಡೆದಿದೆ. ತೊರೆಬೀದಿಯಲ್ಲಿ ಸುನಿತಾ ಎಂಬುವರ ಪುತ್ರಿ ಸೌಮ್ಯ ಎಂಬವರಿಗೆ ನಾಯಿ ಕಾಲಿಗೆ ಕಚ್ಚಿ ಗಂಭೀರ ಗಾಯ ಉಂಟಾಗಿದೆ.

ಗಾಯಾಳು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದಿದ್ದಾರೆ. ಪೊನ್ನಂಪೇಟೆಯಲ್ಲಿ ಮಿತಿಮೀರಿದ ಬೀದಿ ನಾಯಿಗಳು ಎಲ್ಲಾ ಮೀನು ಮತ್ತು ಮಾಂಸ ಅಂಗಡಿಗಳ ಮುಂಭಾಗ ರಾತ್ರಿ ಹೊತ್ತು ಕಾಣಿಸಿಕೊಳ್ಳುತ್ತಿದ್ದು, ಬೆಳಂಬೆಳ್ಳಗೆ ನಾಯಿಗಳೆಲ್ಲ ಆಹಾರ ಆರಿಸಿ ಪಟ್ಟಣದ ಬೀದಿಬೀದಿಗಳಲ್ಲಿ ಸಂಚರಿಸುವ ದೃಶ್ಯ ಸರ್ವೇಸಾಮಾನ್ಯವಾಗಿದೆ. ಪಟ್ಟಣ ಪಂಚಾಯಿತಿಗೆ ಮೌಖಿಕವಾಗಿ ಹಲವರು ದೂರು ನೀಡಿದ್ದರು ಕೂಡ ಯಾವುದೇ ರೀತಿಯ ಸ್ಪಂದನೆ ದೊರಕುತ್ತಿಲ್ಲ ಎಂದು ಹಲವು ಸಾರ್ವಜನಿಕರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

ಪೊನ್ನoಪೇಟೆಯ ಮುಖ್ಯ ರಸ್ತೆಯ ಲಕ್ಷ್ಮಿ ವೈನ್ ಶಾಪ್ ಮುಂಭಾಗ ಅಂಗನವಾಡಿಗೆ 2 1/2 ವರ್ಷದ ಮಗು ಝೋಯ ಳನ್ನು ತಾಯಿ ಅನಿಷಾ ಎಂಬುವವರು ಕರೆದುಕೊಂಡು ಹೋಗುತ್ತಿದ್ದಾಗ ಬೀದಿ ನಾಯಿ ಮಗುವಿಗೆ ಕಚ್ಚಿ ಗಾಯ ಗೊಳಿಸಿದ ಘಟನೆ ಇಂದು ಬೆಳ್ಳಿಗೆ 9. 30 ಗಂಟೆಗೆ ನಡೆದಿತ್ತು.

ಕಳೆದ 15 ದಿನಗಳಿಂದ ತೊರೆಬೀದಿ, ಕುಂದ ರಸ್ತೆ, ಸೇರಿದಂತೆ ವಿವಿದೆಡೆ 8 ಕ್ಕು ಹೆಚ್ಚು ಜನರಿಗೆ ಬೀದಿ ನಾಯಿ ಕಚ್ಚಿ ಗಾಯ ಗೊಳಿಸಿದೆ. ಪೊನ್ನoಪೇಟೆಯಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಕ್ರಮ ಕೈಗೊಳುವಂತೆ ಪಟ್ಟಣ ಪಂಚಾಯತ್ ಆಡಳಿತ ಮಂಡಳಿಗೆ ಸರ್ವಾಜನಿಕರು ಅಗ್ರಹಿಸಿದ್ದಾರೆ.

You may also like