Home » Udupi ಯಲ್ಲಿ ಬಸ್‌ ಚಾಲಕರಿಬ್ಬರಿಗೆ ತಂಡದಿಂದ ಚೂರಿ ಇರಿತ!!!

Udupi ಯಲ್ಲಿ ಬಸ್‌ ಚಾಲಕರಿಬ್ಬರಿಗೆ ತಂಡದಿಂದ ಚೂರಿ ಇರಿತ!!!

0 comments

Udupi: ಬಸ್‌ ಚಾಲಕರಿಬ್ಬರಿಗೆ ರಿಕ್ಷಾದಲ್ಲಿ ಬಂದ ತಂಡವೊಂದು ಚೂರಿಯಲ್ಲಿ ಇರಿದ ಘಟನೆಯೊಂದು ಗುರುವಾರ ರಾತ್ರಿ ನಡೆದಿದೆ. ಈ ಘಟನೆ ಬನ್ನಂಜೆಯಲ್ಲಿ ನಡೆದಿದೆ.

ಜೆಎಮ್‌ಟಿ ಬಸ್‌ ಚಾಲಕರಾದ ಸಂತೋಷ ಹಾಗೂ ಶಿಶಿರ್‌ ಕೆಲಸ ಮುಗಿಸಿ ಬನ್ನಂಜೆ ಕಡೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ರಿಕ್ಷಾದಲ್ಲಿ ಬಂದಿದ್ದ ಖಾಸಗಿ ಬಸ್‌ವೊಂದರ ಮ್ಯಾನೇಜರ್‌ ಹಾಗು ಚಾಲಕರಾದ ಬುರನ್‌ ಮತ್ತು ಸುದೀಪ್‌ ಅಡ್ಡಗಟ್ಟಿ ಚೂರಿ ಇರಿದಿರುವ ಕುರಿತು ವರದಿಯಾಗಿದೆ.

ಉಡುಪಿ ಸಿಟಿ ಬಸ್‌ ಚಾಲಕರ ನಡುವೆ ಪರ್ಯಾದ ದಿನದಂದು ಗಲಾಟೆ ನಡೆದಿತ್ತು. ಈ ವಿಚಾರವಾಗಿ ಠಾಣೆಯಲ್ಲಿ ರಾಜಿ ಪಂಚಾಯಿತಿ ಮಾಡಲಾಗಿತ್ತು. ಅನಂತರ ಈ ಕೃತ್ಯ ಎಸಗಿರುವ ಘಟನೆ ವರದಿಯಾಗಿದೆ. ಗಾಯಗೊಂಡಿದ್ದ ಬಸ್‌ ಚಾಲಕರು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿದೆ.

You may also like

Leave a Comment