Home » Ullal: 24 ದನಗಳ ಅಕ್ರಮ ಸಾಗಾಟ, ರಕ್ಷಣೆ: ಆರೋಪಿ ಸೆರೆ, ಇನ್ನೋರ್ವ ಪರಾರಿ

Ullal: 24 ದನಗಳ ಅಕ್ರಮ ಸಾಗಾಟ, ರಕ್ಷಣೆ: ಆರೋಪಿ ಸೆರೆ, ಇನ್ನೋರ್ವ ಪರಾರಿ

0 comments

Ullal: ಕೇರಳ ಭಾಗದಿಂದ ಕದ್ದ ದನಗಳನ್ನು ಕಂಟೈನರ್‌ನಲ್ಲಿ ಕೂಡಿಹಾಕಿ ಅಕ್ರಮವಾಗಿ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿ ಚಾಲಕ ಉತ್ತರ ಪ್ರದೇಶ ಮುಜಾಫರ್‌ ನಗರದ ಆಸಿಫ್‌ (25) ಎಂಬಾತನನ್ನು ಬಂಧನ ಮಾಡಿದ್ದಾರೆ. ಒಟ್ಟು 24 ದನಗಳನ್ನು ರಕ್ಷಣೆ ಮಾಡಲಾಗಿದೆ.

ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಮಂಗಳೂರು ಸಿಸಿಬಿ ಘಟಕದ ಪಿಎಸ್‌ಐ ಶರಣಪ್ಪ ಭಂಡಾರಿ ನೇತೃತ್ವದ ತಂಡ ಜು.1 ರ ನಸುಕಿನ ಜಾವ ತಲಪಾಡಿ ಟೋಲ್‌ ಗೇಟ್‌ ಬಳಿ ಕಾರ್ಯಾಚರಣೆ ಮಾಡಿ, ದನಗಳನ್ನು ಕೇರಳದಿಂದ ಕಳವುಗೈದು ಸಾಗಿಸುತ್ತಿರುವುದಾಗಿ ಆರೋಪಿ ತಿಳಿಸಿರುವ ಕುರಿತು ವರದಿಯಾಗಿದೆ.

ಈ ಘಟನೆ ಸಂಬಂಧ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

You may also like