Home » Ullala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಆರೋಪಿಗಳು 4 ದಿನ ಪೊಲೀಸ್‌ ಕಸ್ಟಡಿಗೆ!

Ullala: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಂಧಿತ ಆರೋಪಿಗಳು 4 ದಿನ ಪೊಲೀಸ್‌ ಕಸ್ಟಡಿಗೆ!

0 comments

Ullala: ಪಶ್ಚಿಮ ಬಂಗಾಲ ಮೂಲದ ಯುವತಿಯ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಹೆಚ್ಚಿನ ತನಿಖೆಗೆ ನಾಲ್ಕು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

ಮುನ್ನೂರು ಗ್ರಾಮದ ನೇತ್ರಾವತಿ ನದಿ ತಟದ ಬಂಗ್ಲೆ ಹೌಸ್‌ ಬಳಿ ಸಾಮೂಹಿಕ ಅತ್ಯಾಚಾರ ನಡೆದಿದೆ.

ಸಂತ್ರಸ್ತೆ ಯುವತಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ವೈದ್ಯಕೀಯ ವರದಿ ಪೊಲೀಸರ ಕೈ ಸೇರಲಿದೆ. ಘಟನೆ ನಡೆದ 24 ಗಂಟೆಯೊಳಗೆ ರಿಕ್ಷಾ ಚಾಲಕ ಮೂಲ್ಕಿ ಮೂಲಕ ಪ್ರಭುರಾಜ್‌, ಕುಂಪಲದ ಮಿಥುನ್‌ ಮತ್ತು ಪಡೀಲ್‌ನ ಮಣಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಲೆಕ್ಟ್ರಿಶಿಯನ್‌ ಕೆಲಸ ಮಾಡುತ್ತಿದ್ದ ಮಿಥುನ್‌ ವಿರುದ್ಧ ಲೈಂಗಿಕ ಕಿರುಕುಳ ಸೇರಿ ಎರಡು ಪ್ರಕರಣ ಪಾಂಡೇಶ್ವರ ಮಹಿಳಾ ಠಾಣೆ ಮತ್ತು ಉಳ್ಳಾಲ ಠಾಣೆಯಲ್ಲಿ ದಾಖಲಾಗಿದೆ. ಮಣಿ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿದ್ದು, ಈತನ ಮೇಲೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕಳವು ಪ್ರಕರಣ ದಾಖಲಾಗಿದೆ. ರಿಕ್ಷಾ ಚಾಲಕ ಪ್ರಭುರಾಜ್‌ ವಿರುದ್ಧ ಯಾವುದೇ ಪ್ರಕರಣಗಳಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿದ್ದಾರೆ.

You may also like