Home » Uppinangady: ಹೆಂಡತಿ ತವರು ಮನೆಗೆ ಹೋದ ಬೇಸರ; ಗಂಡ ಸುಸೈಡ್!

Uppinangady: ಹೆಂಡತಿ ತವರು ಮನೆಗೆ ಹೋದ ಬೇಸರ; ಗಂಡ ಸುಸೈಡ್!

0 comments

Uppinangady: ಪತ್ನಿ ತವರು ಮನೆಗೆ ಹೋದ ಬೇಸರದಲ್ಲಿ ಪತಿಯೋರ್ವ ನೇಣಿಗೆ ಶರಣಾದ ಘಟನೆ ಉಪ್ಪಿನಂಗಡಿ ಪೊಲೀಸ್‌ ಠಾಣಾ ವ್ಯಾಪ್ತಿಯ ಕೌಕ್ರಾಡಿ ಗ್ರಾಮದ ಪಡ್ಲಡ್ಕ ಎಂಬಲ್ಲಿ ನಡೆದಿದೆ.

ಶೇಷಪ್ಪ (38) ಎಂಬುವವರೇ ನೇಣಿಗೆ ಶರಣಾದವರು.

ಗುರುವಾರ ರಾತ್ರಿ ಮನೆಗೆ ಬಂದಾತ ತಾಯಿಯೊಂದಿಗೆ ಜಗಳವಾಡಿದ್ದು, ತಾಯಿ ತಮ್ಮ ರಕ್ಷಣೆಗೆಂದು ನೆರೆಮನೆಗೆ ಹೋಗಿದ್ದರು. ಈ ವೇಳೆ ಮನೆಯ ಎದುರುಗಡೆಯ ಹಾಲ್‌ನಲ್ಲಿ ಅಡ್ಡಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈತನ ಪತ್ನಿ ತವರು ಮನೆಗೆ ಹೋಗಿರುವ ಬೇಸರದಿಂದ ಜೀವನದಲ್ಲಿ ಜಿಗುಪ್ಸೆ ಹೊಂದಿ ಈ ಕೃತ್ಯವೆಸಗಿರುವುದಾಗಿ ರಾಮಕ್ಕ ಅವರು ಪೊಲೀಸರಿಗೆ ದೂರಿನಲ್ಲಿ ತಿಳಿಸಿದ್ದಾರೆ.

ಉಪ್ಪಿನಂಗಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like