Home » Shimogga: ಕ್ರಿಕೆಟ್‌ ವಿಚಾರಕ್ಕೆ ಗಲಾಟೆ; ಓರ್ವನ ಕೊಲೆಯಲ್ಲಿ ಪರ್ಯಾವಸನ!

Shimogga: ಕ್ರಿಕೆಟ್‌ ವಿಚಾರಕ್ಕೆ ಗಲಾಟೆ; ಓರ್ವನ ಕೊಲೆಯಲ್ಲಿ ಪರ್ಯಾವಸನ!

0 comments
Crime News Bangalore

Shimogga: ಕ್ರಿಕೆಟ್‌ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಓರ್ವನ ಕೊಲೆಯಾಗಿರುವ ಘಟನೆ ಜಿಲ್ಲೆಯ ಭದ್ರಾವತಿ ನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ.

ಅರುಣ್‌ ಕೊಲೆಯಾದ ಯುವಕ.

ಸೋಮವಾರ ಸಂಜೆ ಯುವಕರ ಗುಂಪೊಂದು ಕ್ರಿಕೆಟ್‌ ಆಡಿದ್ದು, ಅನಂತರ ಕ್ರಿಕೆಟ್‌ನ ವಿಚಾರಕ್ಕೆ ಸಂಬಂಧಪಟ್ಟಂತೆ ಪರಸ್ಪರ ಕಿತ್ತಾಡಿದ್ದಾರೆ. ಈ ವಿಷಯ ಅಲ್ಲಿಗೆ ಮುಗಿದಿತ್ತಾದರೂ, ಒಂದು ಗುಂಪು ಪುನಃ ರಾತ್ರಿ ಮಾತನಾಡಬೇಕು ಎಂದು ಕರೆತು ತಗಾದೆ ಮಾಡಿದೆ. ಅಲ್ಲದೆ ಅರುಣ್‌ ಹಾಗೂ ಸಂಜಯ್‌ ಎಂಬುವವರ ಮೇಲೆ ತೀವ್ರ ಹಲ್ಲೆ ಮಾಡಿದೆ.

ಭರ್ಚಿಯಿಂದ ಇರಿದಿದ್ದರಿಂದ ಅರುಣ್‌ ಮೃತಪಟ್ಟಿದ್ದಾನೆ. ಸಂಜಯ್‌ ಮೇಲೆ ಗಂಭೀರವಾಗಿ ಗಾಯವಾಗಿರುವ ಕುರಿತು ತಿಳಿದು ಬಂದಿದೆ. ಈ ಘಟನೆ ಕುರಿತು ಎಸ್ಪಿ ಮಿಥುನ್‌ ಕುಮಾರ್‌ ಜಿ.ಕೆ. ಅವರು ಕ್ರಿಕೆಟ್‌ ವಿಚಾರಕ್ಕೆ ಈ ಘಟನೆ ನಡೆದಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ, ತನಿಖೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

You may also like