Home » ಚಿತ್ರಮಂದಿರದ ಟಾಯ್ಲೆಟ್‌ನಲ್ಲಿ ವಿಡಿಯೊ ರೆಕಾರ್ಡ್: ಅಪ್ರಾಪ್ತನ ಬಂಧನ

ಚಿತ್ರಮಂದಿರದ ಟಾಯ್ಲೆಟ್‌ನಲ್ಲಿ ವಿಡಿಯೊ ರೆಕಾರ್ಡ್: ಅಪ್ರಾಪ್ತನ ಬಂಧನ

0 comments

ಬೆಂಗಳೂರು: ಚಿತ್ರಮಂದಿರವೊಂದರ ಮಹಿಳೆಯರ ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇರಿಸಿ ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ನೇಪಾಳ ಮೂಲದ ಹದಿನೇಳು ವರ್ಷದ ಅಪ್ರಾಪ್ತನನ್ನು ಮಡಿವಾಳ ಠಾಣೆ ಪೊಲೀಸರು ಬಂಧಿ ಸಿದ್ದಾರೆ. ಕೃತ್ಯದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಬಾಲಕ ತಲೆಮರೆಸಿಕೊಂಡಿದ್ದಾನೆ.

ಚಿಕ್ಕಮಡಿವಾಳದ ವಿ.ಪಿ. ರಸ್ತೆಯ ಸಂಧ್ಯಾ ಥಿಯೇಟರ್‌ನಲ್ಲಿ ತೆಲುಗು ಸಿನಿಮಾವೊಂದರ ರಾತ್ರಿ ಶೋ ನೋಡಲು ಮಹಿಳೆಯೊಬ್ಬರು ಕುಟುಂಬದ ಜತೆ ತೆರಳಿದ್ದರು. ರಾತ್ರಿ 9.15ರ ಸುಮಾರಿಗೆ ಇಂಟರ್‌ವೆಲ್ ಸಮಯದಲ್ಲಿ ಮಹಿಳೆ ಶೌಚಾಲಯಕ್ಕೆ ತೆರಳಿದ್ದಾಗ ಗೋಡೆ ಮೇಲೆ ಮೊಬೈಲ್ ಆನ್ ಮಾಡಿಟ್ಟಿರುವುದನ್ನು ತಕ್ಷಣ ಸಹಾಯಕ್ಕೆ ಕಿರುಚಿಕೊಂಡು ಪಕ್ಕದ ಶೌಚಾಲಯದಲ್ಲಿದ್ದ ಅಪ್ರಾಪ್ತನನ್ನು ಹಿಡಿದುಕೊಂಡಿದ್ದರು.

ಆರೋಪಿಯನ್ನು ಸುತ್ತುವರಿದ ನಾಗರಿಕರು ಹಿಗ್ಗಾಮುಗ್ಗಾ ಥಳಿಸಿ ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿದ್ದರು. ಸ್ಥಳಕ್ಕೆ ತೆರಳಿದ್ದ ಹೊಯ್ಸಳ ಸಿಬ್ಬಂದಿ ಆರೋಪಿಯನ್ನು ವಶಕ್ಕೆ ಪಡೆದು ಮೊಬೈಲ್ ಜಪ್ತಿ ಮಾಡಿದ್ದಾರೆ. ಸಂತ್ರಸ್ತೆ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ಬಾಲಮಂದಿರಕ್ಕೆ ಕಳಿಸ ಲಾಗಿದೆ. ಆರೋಪಿಯ ಮೊಬೈಲ್ ಜಪ್ತಿ ಮಾಡಿದ್ದು ಪರಿಶೀಲಿಸಲಾಗುತ್ತಿದೆ.

ತಲೆಮರೆಸಿಕೊಂಡಿರುವವನ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

”ಆರೋಪಿಯ ಸಂಬಂಧಿಕನು ಥಿಯೇಟರ್‌ನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ನಗರಕ್ಕೆ ಬಂದಿದ್ದ ಆರೋಪಿ ಸಂಬಂಧಿಕನ ಜತೆ ಥಿಯೇಟರ್‌ನಲ್ಲಿ ಉಳಿದುಕೊಳ್ಳುತ್ತಿದ್ದ. ಆರೋಪಿಯಿಂದ ಜಪ್ತಿ ಮಾಡಿದ ಮೊಬೈಲ್ ಅನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗುವುದು,” ಪೊಲೀಸರು ಹೇಳಿದ್ದಾರೆ.

You may also like