Viral Video : ಪ್ರವಾಸಕ್ಕೆ ಬಂದಿರುವ ವಿದೇಶಿ ಯುವತಿಗೆ ಯುವಕನೊಬ್ಬ ಚಡ್ಡಿ ಬಿಚ್ಚಿ ತನ್ನ ಖಾಸಗಿ ರಂಗ ತೋರಿಸುವ ಮುಖಾಂತರ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿದೆ. ಟೀ ಕುರಿತಾದ ಅಘಾತಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಹೌದು, ನ್ಯೂಜಿಲೆಂಡ್ನ ಮಹಿಳಾ ಪ್ರವಾಸಿಯೊಬ್ಬರು ಏಕಾಂಗಿ ಪ್ರವಾಸದ ಸಮಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಆಘಾತಕಾರಿ ಅನುಭವವನ್ನು ವಿವರಿಸಿ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
ಅಂದಹಾಗೆ ರಿಕ್ಷಾ ರೀತಿಯ ವಾಹನದಲ್ಲಿ ಶ್ರೀಲಂಕಾದ ಮೂಲಕ ಪ್ರಯಾಣಿಸುತ್ತಿದ್ದ ಮಹಿಳೆ, ಅರುಗಮ್ ಕೊಲ್ಲಿಯಿಂದ ಪಾಸಿಕುಡಾ ಕಡೆಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸ್ಕೂಟರ್ನಲ್ಲಿ ಒಬ್ಬ ವ್ಯಕ್ತಿ ತನ್ನನ್ನು ಹಿಂಬಾಲಿಸುತ್ತಿದ್ದನು. ಆರಂಭದಲ್ಲಿ ಅವನನ್ನು ನಿರ್ಲಕ್ಷಿಸಿ ತನ್ನ ಪ್ರಯಾಣವನ್ನು ಮುಂದುವರಿಸಿದರೂ, ಅವಳು ಸ್ವಲ್ಪ ವಿರಾಮಕ್ಕಾಗಿ ನಿಲ್ಲಿಸಿದಾಗ ಆ ವ್ಯಕ್ತಿ ಮತ್ತೆ ಕಾಣಿಸಿಕೊಂಡನು. ಅವನು ತನ್ನ ಸ್ಕೂಟರ್ ನಿಲ್ಲಿಸಿ, ಅವಳ ಬಳಿಗೆ ಹೋಗಿ ಮಾತನಾಡಲು ಶುರು ಮಾಡಿದ್ದಾನೆ.
ಮಾತನಾಡುತ್ತ ಲೈಂಗಿಕವಾಗಿ ಸ್ಪಷ್ಟವಾದ ಪ್ರಶ್ನೆಯನ್ನು ಕೇಳಿ ಇದ್ದಕ್ಕಿದ್ದಂತೆ ತನ್ನ ಜನನಾಂಗಗಳನ್ನು ತೆಗೆದಿದ್ದಾನೆ. ಕೂಡಲೇ ಭಯಗೊಂಡ ಮಹಿಳೆ ಅಲ್ಲಿಂದ ಕಾಲ್ಕಿತ್ತಿದ್ದಾಳೆ.ಈ ಘಟನೆಯು ತನ್ನನ್ನು ತುಂಬಾ ನಡುಗಿಸಿದೆ ಎಂದು ಮಹಿಳೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾಳೆ.
