3
Bagalkote: ಕೇವಲ ಒಂದು ದಿನದ ಮಗು ಕಳ್ಳತನವಾಗಿರುವ ಘಟನೆ ಬಾಗಲಕೋಟೆಯ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಮಾಬೂಬಿ (30) ಎಂಬುವವರ ಒಂದು ದಿನದ ಮಗುವನ್ನು ತಾನು ನರ್ಸ್ ಎಂದು ಹೇಳಿಕೊಂಡು ಒಬ್ಬಾಕೆ ಕದ್ದೊಯ್ದಿದ್ದಾಳೆ.
ಇನ್ನು ನರ್ಸಿಂದು ಹೇಳಿಕೊಂಡು ಬಂದ ಕಳ್ಳಿ ಮಗುವಿಗೆ ಕಫ ಆಗಿದೆ ಕಫವನ್ನು ತೆಗೆಸಿಕೊಂಡು ಬರುತ್ತೇನೆ ಎಂದು ಹೇಳಿ ಮಗುವನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಸದ್ಯ ಈ ಪ್ರಕರಣ ನವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
