ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಕೊಡಿಯಾಲ ಗ್ರಾಮದ ಆರ್ವಾರ ಎಂಬಲ್ಲಿ ತಾಯಿ ತನ್ನ ಮೂರು ವರ್ಷದ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಸಾವಿನಲ್ಲಿ ಸಂಶಯವಿದೆಯಿಂದ ಮಹಿಳೆಯ ತಾಯಿ ದೂರು ನೀಡಿದ್ದು, ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಯತೀಶ್ ಆರ್ವಾರ್ ಅವರ ಸೋದರ ಹರೀಶ್ ಎಂಬುವವರ ಪತ್ನಿ ಮಧುಶ್ರೀ (34) ಮತ್ತು ಆಕೆಯ ಪುತ್ರಿ ಧೃತಿ (3) ಮೃತಪಟ್ಟವರು.
ಸ್ಥಳೀಯರ ಮಾಹಿತಿ ಪ್ರಕಾರ, ಶನಿವಾರ ರಾತ್ರಿ ಎಲ್ಲರೊಂದಿಗೆ ಮಧುಶ್ರೀ ಊಟ ಮಲಗಿಸಿ ಮಲಗಿದ್ದರು. ಬೆಳಗ್ಗೆ ನೋಡಿದಾಗ ತಾಯಿ, ಮಗು ಇರಲಿಲ್ಲ, ಮನೆ ಮಂದಿ ಹುಡುಕಾಟ ಮಾಡಿದಾಗ ಇಬ್ಬರ ಶವಗಳು ಬಾವಿಯಲ್ಲಿ ಪತ್ತೆಯಾಗಿದೆ. ಎಲ್ಲರೂ ನಿದ್ದೆಯಲ್ಲಿದ್ದ ಸಂದರ್ಭದಲ್ಲಿ ಮಗುವಿನೊಂದಿಗೆ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.
ಮಗಳ ಸಾವಿನ ಕುರಿತು ಹೆತ್ತವರು ನೀಡಿದ ದೂರಿನ ಪ್ರಕಾರ ಪ್ರಕರಣ ದಾಖಲಾಗಿದೆ. ಬೆಳ್ಳಾರೆ ಪೊಲೀಸರು ಮನೆಯವರನ್ನು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.
