Crime: ಸೊಂಟ ನೋವಿಂದ ಬಳಲುತ್ತಿದ್ದ ಮಹಿಳೆ ಒಬ್ಬರನ್ನು ಕತ್ತು ಹಿಸುಕಿ ಕೊಂದಿರುವ ಘಟನೆಯೊಂದು ನಡೆದಿದೆ. ಪದ್ಮಬಾಯಿ (45) ಮೃತ ದುರ್ದೈವಿಯಾಗಿದ್ದಾರೆ.
ಪದ್ಮಾಬಾಯಿ ಅವರು ತನ್ನ ಮಗಳು ಶಿಲ್ಪಾ ಗೆ ಕರೆ ಮಾಡಿ ನನಗೆ ಸೊಂಟ ನೋವು ಆಗುತ್ತಿದೆ. ಏಳಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಈ ವೇಳೆ ಶಿಲ್ಪಾ ಅವರ ಅಕ್ಕ ಮೀರಾಬಾಯಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ತೋರಿಸುವುದು ಬೇಡ. ಮಲ್ಪೆಯಲ್ಲಿ ಒಳ್ಳೆ ಡಾಕ್ಟರ್ ಹತ್ರ ತೋರಿಸ್ತೇನೆ ಎಂದಿದ್ದಾರೆ.
ಹಣವಿಲ್ಲ ಅಂದ್ರೂ ಪರ್ವಾಗಿಲ್ಲ ನಾನು ತೋರಿಸ್ತೇನೆ ಎಂದು ಹೇಳಿ ನಂತರ ಮನೆಗೆ ಕರೆದುಕೊಂಡು ಹೋಗಿ ರಾತ್ರಿಯ ವೇಳೆ ಅಮ್ಮನ ಚಿಕಿತ್ಸೆಗೆ ಹಣ ಹಾಕುವಂತೆ ಮೀರಾಬಾಯಿ ಮಗ ಶಿಲ್ಪಾ ಅವರಿಗೆ ಕಾಲ್ ಮಾಡಿದ್ದಾನೆ.
ಆದರೆ ಮರುದಿನ ಬೆಳಿಗ್ಗೆ ಅವರು ಎದ್ದೇಳದೆ ಇರುವುದನ್ನು ನೋಡಿ ಜಿಲ್ಲಾಸ್ಪತ್ರೆಗೆ ದಾಖಲಿಸಿದಾಗ ಅವರು ಮೃತಪಟ್ಟಿದ್ದಾರೆ. ಕುತ್ತಿಗೆಯ ಬಳಿ ಕೆಂಪಾಗಿದ್ದು ಒತ್ತಿ ಕೊಲೆ ಮಾಡಿರುವುದರ ಬಗ್ಗೆ ಸಂಶಯ ವ್ಯಕ್ತವಾಗಿದೆ. ಶಿಲ್ಪಾ ಅವರು ಮಣಿಪಾಲ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:Health: ಎಷ್ಟು ಆರೋಗ್ಯಕರವಾಗಿದ್ದರೂ ಕೂಡ ರಾತ್ರಿ ಈ ಆಹಾರ ತಿನ್ನಬೇಡಿ!
