Home » U.P: ಸಂಚರಿಸುತ್ತಿದ್ದ ರೈಲಿನ ಅಡಿ ಮಲಗಿ ರೀಲ್ಸ್‌ ಹುಚ್ಚಾಟ; ಯುವಕ ಅರೆಸ್ಟ್‌!

U.P: ಸಂಚರಿಸುತ್ತಿದ್ದ ರೈಲಿನ ಅಡಿ ಮಲಗಿ ರೀಲ್ಸ್‌ ಹುಚ್ಚಾಟ; ಯುವಕ ಅರೆಸ್ಟ್‌!

0 comments

U.P: ರೀಲ್‌ ಚಿತ್ರೀಕರಣ ಮಾಡಲು ರೈಲು ಹಳಿ ಮೇಲೆ ಮಲಗಿ ತನ್ನ ಪ್ರಾಣದ ಜೊತೆ ಚೆಲ್ಲಾಟವಾಡಿದ ಯುವಕನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ರಂಜೀತ್‌ ಚೌರಾಸಿಯಾ ಎಂಬ ಯುವಕ ರೈಲು ಹಳಿ ಮೇಲೆ ಮಲಗಿ ರೀಲ್‌ ಚಿತ್ರೀಕರಣ ಮಾಡಿದ್ದಾನೆ. ಈತ ಹಳಿಯಲ್ಲಿ ಮಲಗಿದ್ದ ಸಂದರ್ಭದಲ್ಲಿಯೇ ರೈಲು ಈತನ ಮೇಲೆ ಹಾದು ಹೋಗಿದೆ. ವಿಡಿಯೋಗೆ ಶಾರುಖ್‌ಖಾನ್‌ ಅವರ ಬಾದ್‌ಶಾ ಚಿತ್ರದ ಹಾಡನ್ನು ಸೇರಿಸಿ ವೈರಲ್‌ ಮಾಡಿದ್ದಾನೆ.

ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ವಿಡಿಯೋ ವೈರಲ್‌ ಆದಾಗ ಈ ಘಟನೆ ರೈಲ್ವೆ ಇಲಾಖೆ ಗಮನಕ್ಕೆ ಬಂದಿದ್ದು, ರೈಲ್ವೆ ಹಳಿಯಲ್ಲಿ ಮಲಗಿ ಸಂಚಾರಕ್ಕೆ ಅಡ್ಡಿಪಡಿಸಿದ್ದಕ್ಕಾಗಿ ರೈಲ್ವೆ ಪೊಲೀಸರು ಯುವಕನನ್ನು ಗುರುತಿಸಿ ಬಂಧನ ಮಾಡಿದ್ದಾರೆ.

You may also like