3
Ilicit Relationship: ಹರಿಯಾಣದಲ್ಲಿ ಪತ್ನಿಯೋರ್ವಳು ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಕೊಂದು ನಂತರ ಶವವನ್ನು ಚರಂಡಿಗೆ ಎಸೆದಿರುವಂತಹ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಮಾರ್ಚ್‌ನಲ್ಲಿ ನಡೆದಿದೆ. ಆರೋಪಿ ಮಹಿಳೆ ರವೀನಾ ಯೂಟ್ಯೂಬರ್ ಆಗಿದ್ದು, ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದಿದ್ದಾಳೆ.
ವರದಿಗಳ ಪ್ರಕಾರ ರವೀನಾ ಪತಿ ಪ್ರವೀಣ್ ಮದ್ಯವ್ಯಸನಿಯಾಗಿದ್ದು, ಇಬ್ಬರ ನಡುವೆ ಆಗಾಗ ಜಗಳಗಳಾಗುತ್ತಿತ್ತು. ದಂಪತಿ 2017ರಲ್ಲಿ ಮದುವೆಯಾಗಿದ್ದು, ಆರು ವರ್ಷದ ಮಗನಿದ್ದಾನೆ.
ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
