Home » Astrology Tips: ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದೆಂಬ ಆಸೆಯೇ? ಇದೊಂದು ಹಾರ ಧರಿಸಿ, ಎಂದೂ ಆರ್ಥಿಕ ಸಮಸ್ಯೆ ತಪ್ಪಿಸಿ !!

Astrology Tips: ಮನೆಯಲ್ಲಿ ಎಂದಿಗೂ ಹಣಕಾಸಿನ ಕೊರತೆ ಬರಬಾರದೆಂಬ ಆಸೆಯೇ? ಇದೊಂದು ಹಾರ ಧರಿಸಿ, ಎಂದೂ ಆರ್ಥಿಕ ಸಮಸ್ಯೆ ತಪ್ಪಿಸಿ !!

2 comments
Money Tips

Money Problem: ಹಗಲಿರುಳು ದುಡಿದರೂ ಕೈಯಲ್ಲಿ ದುಡ್ಡೇ ಉಳಿಯಲ್ಲ. ಇದರ ನಡುವೆ ತಲೆ ಚಿಟ್ಟು ಹಿಡಿಸುವಷ್ಟು ಕಷ್ಟ ಕಾರ್ಪಣ್ಯಗಳು, ಹಣಕಾಸಿನ ಸಮಸ್ಯೆಗಳು, ವೈವಾಹಿಕ ಜೀವನದಲ್ಲಿ ಮುನಿಸು ಹೀಗೆ ನಾನಾ ಸಮಸ್ಯೆಗಳು ಬೆನ್ನು ಬಿಡದ ಬೇತಾಳದಂತೆ ನಿಮ್ಮನ್ನು ಕೂಡ ಕಾಡುತ್ತಿದೆಯೇ ?ಹಾಗಿದ್ದರೆ, ಹಣಕಾಸಿನ ಸಮಸ್ಯೆಯಿಂದ (Money Problems)ಪಾರಾಗಲು ಈ ಹಾರ(Mala) ಧರಿಸಿ ನೋಡಿ!!

ಹಿಂದೂ ಧರ್ಮದಲ್ಲಿ ಶಿವ ಪೂಜೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ. ಶಿವನ ಪೂಜೆ ಮಾಡಿದರೆ ನಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತದೆ ಎಂಬ ನಂಬಿಕೆಯಿದೆ.ಇದರ ಜೊತೆಗೆ ಶಿವನಿಗೆ ಇಷ್ಟವಾದ ವಸ್ತುಗಳನ್ನು ಧರಿಸುವುದರಿಂದ ಅನೇಕ ಲಾಭಗಳು ಸಿಗುತ್ತದೆ ಎಂಬ ನಂಬಿಕೆಯಿದೆ. ಇದನ್ನ ಧರಿಸುವಾಗ ಕೆಲ ನಿಯಮಗಳನ್ನ ನಾವು ಅನುಸರಿಸಬೇಕು. ಮುಖ್ಯವಾಗಿ ಸೋಮವಾರ ಅಥವಾ ಗುರುವಾರದಂದು ಪಂಚಮುಖಿ ರುದ್ರಾಕ್ಷಿಯನ್ನು ಧರಿಸಬೇಕು.

ರುದ್ರಾಕ್ಷಿ ಮಾಲೆಯನ್ನು ಧರಿಸಲು ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿ ಕೆಂಪು ಬಟ್ಟೆಯನ್ನು ಹಾಸಿ ಅದರಲ್ಲಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ಇದರ ನಂತರ ಶಿವನ ಪೂಜೆ ಮಾಡಿ, ಉತ್ತರ ದಿಕ್ಕಿಗೆ ಕುಳಿತು ರುದ್ರಾಕ್ಷಿಯನ್ನ ಹಾಕಿಕೊಳ್ಳಬೇಕು. ಈ ರುದ್ರಾಕ್ಷಿ ಮಣಿಗಳನ್ನು ಧರಿಸುವುದರಿಂದ ಕೆಟ್ಟ ಶಕ್ತಿಗಳು ದೂರವಾಗುತ್ತದೆ. ಇದು ನಿಮ್ಮ ಮನೋಬಲವನ್ನು ಹೆಚ್ಚಿಸುತ್ತದೆ. ಇದರ ಜೊತೆಗೆ, ರುದ್ರಾಕ್ಷಿ ಮನಸ್ಸನ್ನು ತಿಳಿಗೊಳಿಸುತ್ತದೆ. ರುದ್ರಾಕ್ಷಿ ಮಣಿಗಳನ್ನು ಧರಿಸುವುದರಿಂದ ಏಕಾಗ್ರತೆ ಹೆಚ್ಚಾಗುವ ಜೊತೆಗೆ ಸಂಪತ್ತು ಹೆಚ್ಚಾಗುತ್ತದೆ. ಇದಲ್ಲದೇ, ಆರೋಗ್ಯ ಪ್ರಯೋಜನಗಳು ಕೂಡ ದೊರೆಯುತ್ತದೆ.

ಈ ರುದ್ರಾಕ್ಷ ಮಣಿಗಳನ್ನು ಧರಿಸುವುದರಿಂದ ಒತ್ತಡ ನಿವಾರಿಸಿ ಸಂತೋಷವನ್ನ ಹೆಚ್ಚಿಸುತ್ತದೆ ಕೆಟ್ಟ ಶಕ್ತಿಗಳು ದೂರವಾಗುತ್ತದೆ. ಮಾತ್ರವಲ್ಲದೇ, ಇದು ನಿಮ್ಮ ಮನೋಬಲವನ್ನ ಹೆಚ್ಚಿಸುವ ಜೊತೆಗೆ ಮನಸ್ಸನ್ನು ಶುದ್ಧವಾಗಿಡುತ್ತದೆ ಎನ್ನಲಾಗುತ್ತದೆ. ರುದ್ರಾಕ್ಷವನ್ನು ಧರಿಸುವುದರಿಂದ ಗ್ರಹಗಳ ದೋಷಗಳಿಂದ ಪರಿಹಾರ ಕಂಡುಕೊಳ್ಳಬಹುದು. ಪಂಚಮುಖಿ ರುದ್ರಾಕ್ಷವು ಗುರುವಿನ ಕೆಟ್ಟ ಪರಿಣಾಮಗಳು ಬೀರದಂತೆ ನೋಡಿಕೊಳ್ಳುತ್ತದೆಂಬ ನಂಬಿಕೆಯಿದೆ.

ಇದನ್ನು ಓದಿ: Tour Package: ಹೊಸ ವರ್ಷಕ್ಕೆ ಟ್ರಿಪ್ ಪ್ಲಾನ್ ಮಾಡಿದೋರಿಗೆ ಸಿಹಿ ಸುದ್ದಿ- ಇಲ್ಲಿದೆ ನೋಡಿ ಭರ್ಜರಿ ಪ್ಯಾಕೇಜ್ !! ಎಲ್ಲಿಗೆಲ್ಲಾ ಹೋಗ್ಬೋದು ಗೊತ್ತಾ?

You may also like

Leave a Comment