4
Suicide: ದಂಪತಿ ಮಧ್ಯೆ ನಡೆದ ಜಗಳ ಪತಿಯ ಆತ್ಮಹತ್ಯೆಯಲ್ಲಿ ಅಂತ್ಯವಾದ ಘಟನೆ ನಿಟ್ಟೆಯಲ್ಲಿ ನಡೆದಿದೆ.
ಪೋಸ್ಟ್‌ಮ್ಯಾನ್ ಒಬ್ಬರು ದಂಪತಿ ಮನೆಗೆ ಪತ್ರ ನೀಡಲು ಬಂದಿದ್ದಾಗ ಪತ್ನಿ ಶಕುಂತಲಾ ಅವರು ಗಾಯಗೊಂಡು ಕಂಡುಬಂದಿದೆ. ತಕ್ಷಣವೇ ಪೋಸ್ಟ್‌ಮ್ಯಾನ್ ಅವರು ಶಕುಂತಲಾ ಅವರ ಪುತ್ರ ಸಾಯಿಕಿರಣ್‌ಗೆ ಕರೆ ಮಾಡಿ ವಿಷಯ ತಿಳಿಸಿದ್ದು, ಪುತ್ರ ಮನೆಗೆ ಬಂದು ತಾಯಿಯನ್ನು ವಿಚಾರಿಸಿದಾಗ ತಂದೆ ಕೋಲಿನಿಂದ ಹಲ್ಲೆ ಮಾಡಿರುವುದು ತಿಳಿದು ಬಂದಿದೆ.ತಂದೆ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು, ಬಾಗಿಲು ಬಡಿದರೂ ತೆರೆದಿಲ್ಲ. ಈ ವೇಳೆ ಗಾಯಗೊಂಡಿದ್ದ ತಾಯಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
