Heart attack: ಶಿವಮೊಗ್ಗ ಜಿಲ್ಲೆಯ ವ್ಯಕ್ತಿಯೊಬ್ಬರ ಸಾವು ಮತ್ತೊಮ್ಮೆ ಹೃದಯಘಾತ ದ ಭಯ ಹುಟ್ಟಿಸಿದೆ.ಹೊಳೆಹೊನ್ನೂರು ಸಮೀಪದ ಹನುಮಂತಾಪುರ ಗ್ರಾಮದ ನಿವಾಸಿ 30 ವರ್ಷದ ರಮೇಶ್ ಎಂಬಾತ, ಹಾರ್ಟ್ ಅಟ್ಯಾಕ್ ಆಗಿ ಮೊನ್ನೆ ಸಾವನ್ನಪ್ಪಿದ್ದಾರೆ.
ಹನುಮಂತಾಪುರ ಗ್ರಾಮದ ನಿವಾಸಿ ರಮೇಶ್ ಕಳೆದ ಭಾನುವಾರ ಹರಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದ ಯುವತಿಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ನಂತರ ನವ ದಂಪತಿಗಳು ಸಂಪ್ರದಾಯದಂತೆ ವಧುವಿನ ಮನೆಗೆ ತೆರಳಿದ್ದರು. ಸೋಮವಾರ ವಧುವಿನ ಮನೆಯಲ್ಲಿ ದೇವರ ಮನೆಯಲ್ಲಿ ಪೂಜೆ ಸಲ್ಲಿಸಿ, ಕೈ ಮುಗಿದು ಹೊರಗೆ ಬರುತ್ತಿದ್ದಂತೆಯೇ ರಮೇಶ್ ದಿಢೀರನೆ ಕುಸಿದುಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದ್ದಾರೆ. ಆದರೆ, ರಮೇಶ್ ಕುಸಿದಲ್ಲಿಯೇ ಸಾವನ್ನಪ್ಪಿದ್ದರು. ಮೃತರ ಅಂತ್ಯಕ್ರಿಯೆಯು ಮಂಗಳವಾರ ಹೊಸಕೊಪ್ಪದಲ್ಲಿ ನೆರವೇರಿತು.
