ಪುತ್ತೂರು: ಹೆರಿಗೆ ಸಮಯದಲ್ಲಿ ಮಗು ಸಾವಿಗೀಡಾದ ಕುರಿತು ಸಂಶಯದ ಉಂಟಾದ ಹಿನ್ನೆಲೆಯಲ್ಲಿ ದೂರುದಾರರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವಿನ ಮೃತದೇಹವನ್ನು ಮರಣೊತ್ತರ ಪರೀಕ್ಷೆಗೆ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯಲಾಗಿರುವ ಕುರಿತು ವರದಿಯಾಗಿದೆ.
ಬೆಳ್ಳಾರೆ ಗ್ರಾಮದ ಮಿಲನ್ ಎಂಬುವವರ ಪತ್ನಿ ಚೈತ್ರ ಅವರ ಮೊದಲನೆ ಮಗುವಿನ ಹೆರಿಗೆ ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ನಡೆದಿದೆ. ವೈದ್ಯರು ಜ.15 ರಂದು ಹೆರಿಗೆ ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಜ.13 ಕ್ಕೆ ಆಸ್ಪತ್ರೆಗೆ ದಾಖಲಾಗಲು ಸೂಚನೆ ನೀಡಿದ್ದು, ಅದರಂತೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಅವರನ್ನು ಪರಿಶೀಲನೆ ಮಾಡಿ ಎಲ್ಲಾ ನಾರ್ಮಲ್ ಆಗಿದೆ ಎಂದು ಹೇಳಿ ಹೆರಿಗೆ ನೋವಿಗಾಗಿ ಚುಚ್ಚುಮದ್ದು ನೀಡಿದ್ದರು.
ನಂತರ ನೋವು ಕಾಣಿಸಿದ್ದರಿಂದ ಹೆರಿಗೆ ಕೋಣೆಗೆ ಕರೆದುಕೊಂಡು ಹೋಗಿದ್ದು, ಸಂಜೆ ವೇಳೆ ವೈದ್ಯರು ನನ್ನನ್ನು ಹೆರಿಗೆ ಕೋಣೆಯ ಬಳಿಗೆ ಕರೆದು ನನ್ನಲ್ಲಿ ನಿಮ್ಮ ಪತ್ನಿಗೆ ನಾವು ನಾರ್ಮಲ್ ಹೆರಿಗೆಗೆ ಪ್ರಯತ್ನ ಪಡುತ್ತಿದ್ದು, ನಾರ್ಮಲ್ ಹೆರಿಗೆ ಆಗದೇ ಇದ್ದಾಗ ಸಿಸೇರಿಯನ್ ಮೂಲಕ ಮಗುವನ್ನು ಹೊರಗೆ ತೆಗೆದಿರುತ್ತೇವೆ. ಆದರೆ ಮಗು ಸಿಸೇರಿಯನ್ ಮಾಡಿಸಿ ಹೊರಗೆ ತೆಗೆಯುವಾಗಲೇ ಮೃತಪಟ್ಟಿದೆ ಎಂದು ಹೇಳಿದರು.
ಈ ಕುರಿತು ಪತ್ನಿಯ ಹೆರಿಗೆಯ ಸಮಯದಲ್ಲಿ ಮಗು ಮೃತಪಟ್ಟಿರುವ ಕುರಿತು ಸಂಶಯ ವ್ಯಕ್ತಪಡಿಸಿ ಚೈತ್ರ ಅವರ ಗಂಡ ಮಿಲನ್ ಅವರು ದೂರನ್ನು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿರುವ ಕುರಿತು ವರದಿಯಾಗಿದೆ.
