11
Puttur: ಪುತ್ತೂರು: ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (30) ಮೃತದೇಹವು ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ.
ಅಭಿಷೇಕ್ ಆಳ್ವ ಅವರು ತಮ್ಮ ತಂದೆ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ಪ್ರಸ್ತುತ ನೆಲ್ಯಾಡಿಯ ಚರಣ್ ಬಾರ್ & ರೆಸ್ಟೋರೆಂಟನ್ನು ಲೀಜ್‌ಗೆ ಪಡೆದು ಉದ್ಯಮ ನಡೆಸುತ್ತಿದ್ದರು. ಅಭಿಷೇಕ್ ನಾಪತ್ತೆ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
