Home » Death: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮಾ ವಿಟ್ಲ ನಿಧನ

Death: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮಾ ವಿಟ್ಲ ನಿಧನ

0 comments

Death: ಯಕ್ಷಗಾನ ಕಲಾವಿದ, ನಿವೃತ್ತ ಉಪನ್ಯಾಸಕ ಶಂಭು ಶರ್ಮಾ ವಿಟ್ಲ ಅವರು ತಮ್ಮ 74ನೇ ವಯಸ್ಸಿನಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ನಿಧನರಾದರು. ವಿವಿಧ ಕಾಲೇಜುಗಳಲ್ಲಿ 3 ದಶಕಗಳ ಕಾಲ ಅರ್ಥಶಾಸ್ತ್ರ ಉಪನ್ಯಾಸಕರಾಗಿದ್ದ ಶಂಭು ಶರ್ಮಾ ಅವರು, ಸುಮಾರು 50 ವರ್ಷ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕರ್ನಾಟಕ ಯಕ್ಷಗಾನ ಅಕಾಡೆಮಿ ಕಲಾಸಿರಿ ಪ್ರಶಸ್ತಿ, ಯಕ್ಷಗಾನ ಕಲಾರಂಗ ಪ್ರಶಸ್ತಿ, ಶೇಣಿ ಜನ್ಮಶತಮಾನೋತ್ಸವ ಪ್ರಶಸ್ತಿಗೆ ಭಾಜನರಾಗಿದ್ದರು.

ಶೇಣಿ ಗೋಪಾಲಕೃಷ್ಣ ಭಟ್ ಸಹಿತ ಖ್ಯಾತನಾಮರೊಂದಿಗೆ ಅರ್ಥಗಾರಿಕೆ ಮಾಡಿದ ಅನುಭವ ಶಂಭು ಶರ್ಮ ಅವರಿಗಿತ್ತು. ಇವರು ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಕಲಾಭಿಮಾಣಿಗಳಿಗೆ ಚಿರಪರಿಚಿತರು. ಖಳಪಾತ್ರ ಸಹಿತ ಯಾವುದೇ ಪಾತ್ರ ವಹಿಸಿದರೂ, ಶಂಭು ಶರ್ಮ ಅವರ ಆರ್ಥಗಾರಿಕೆಗೆ ಅಪಾರ ಅಭಿಮಾನಿ ಬಳಗವಿತ್ಗತು. ಕ್ಯಾಸೆಟ್ ಸಹಿತ ಈಗಿನ ನವ ಮಾಧ್ಯಮಗಳಲ್ಲೂ ಶಂಭು ಶರ್ಮ ಅವರ ಪಾತ್ರಗಳನ್ನು ವೀಕ್ಷಿಸುವವರು, ಕೇಳುವ ಅಭಿಮಾನಿಗಳು ಹಲವರಿದ್ದರು.

ಶಂಭು ಶರ್ಮ ಅವರ ನಿಧನ ಯಕ್ಷಗಾನ ಲೋಕಕ್ಕೆ ತುಂಬಲಾರದ ನಷ್ಟ ಎಂದು ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.

You may also like