Home » ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ 6 ವರ್ಷ ಕಡ್ಡಾಯ | ಸರಕಾರದ ಆದೇಶ..ಆದರೆ ಜಾರಿ 2 ವರ್ಷದ ಬಳಿಕ

ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ 6 ವರ್ಷ ಕಡ್ಡಾಯ | ಸರಕಾರದ ಆದೇಶ..ಆದರೆ ಜಾರಿ 2 ವರ್ಷದ ಬಳಿಕ

0 comments

ಬೆಂಗಳೂರು : ರಾಜ್ಯದ ಶಾಲೆಗಳಲ್ಲಿ ಒಂದನೆ ತರಗತಿಗೆ ಪ್ರವೇಶ ಪಡೆಯಲು ಮಕ್ಕಳಿಗೆ ಕಡ್ಡಾಯವಾಗಿ ಆರು ವರ್ಷಗಳು ತುಂಬಿರಬೇಕು ಎಂದು ಶಿಕ್ಷಣ ಇಲಾಖೆಯು ಈ ಹಿಂದೆ ಆದೇಶವನ್ನು ಹೊಡಿಸಿದ್ದು, ಇದು 2025-26ನೆ ಶೈಕ್ಷಣಿಕ ವರ್ಷಕ್ಕೆ ಅನ್ವಯವಾಗಲಿದೆ ಎಂದು ತಿದ್ದುಪಡಿ ಮಾಡಿದೆ.

ಈಗಾಗಲೇ ಆರು ವರ್ಷಗಳು ತುಂಬಿರುವ ಮಕ್ಕಳನ್ನು ಮಾತ್ರ ಒಂದನೆ ತರಗತಿಗೆ ದಾಖಲು ಮಾಡಿಕೊಳ್ಳಲಾಗುವುದು ಎಂದು ಶಿಕ್ಷಣ ಇಲಾಖೆಯು ಆದೇಶ ಹೊರಡಿಸಿ, ವಿವಾದವನ್ನು ಸೃಷ್ಟಿ ಮಾಡಿದೆ. ಈಗ ತಿದ್ದುಪಡಿಯ ಮೂಲಕ ಮುಂದಿನ ಎರಡು ಶೈಕ್ಷಣಿಕ ವರ್ಷಗಳ ಬಳಿಕ ಆದೇಶವು ಅನ್ವಯವಾಗಲಿದೆ ಎಂದು ಇಲಾಖೆಯು ಸಮರ್ಥನೆ ಮಾಡಿಕೊಂಡಿದೆ.

You may also like

Leave a Comment