ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10 ಮತ್ತು 12 ನೇ ತರಗತಿಯ ಹಲವು ವಿಷಯಗಳ ಅಂತಿಮ ಪರೀಕ್ಷಾ ದಿನಾಂಕವನ್ನು ಮಾರ್ಪಡಿಸಿದೆ. 2026ರ ಮಾ.3 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಆಡಳಿತಾತ್ಮಕ ಕಾರಣ ನೀಡಿ ಮಂಡಳಿಯು ಮುಂದೂಡಿದೆ.
ಹತ್ತನೇ ತರಗತಿಯ ಒಟ್ಟು 13 ಮತ್ತು 12 ತರಗತಿಯ 1 ಪರೀಕ್ಷೆಯ ದಿನಾಂಕವನ್ನು ಬದಲಾವಣೆ ಮಾಡಲಾಗಿದೆ. ಮಾ.3 ರಂದು ನಿಗದಿಯಾಗಿದ್ದ 10ನೇ ತರಗತಿಯ ಟಿಬೆಟಿಯನ್, ಜರ್ಮನ್, ಎನ್‌ಸಿಸಿ, ಕಾಶ್ಮೀರಿ ಸೇರಿದಂತೆ ಹಲವು ಪರೀಕ್ಷೆಗಳನ್ನು ಮಾ.11 ಕ್ಕೆ ಮುಂದೂಡಲಾಗಿದೆ.
2026ರ ಮಾರ್ಚ್ 3 ರಂದು ನಡೆಯಬೇಕಿದ್ದ 12 ನೇ ತರಗತಿಯ ಕಾನೂನು ಅಧ್ಯಯನ ವಿಷಯದ ಪರೀಕ್ಷೆಯನ್ನು ಎಪ್ರಿಲ್ 10 ಕ್ಕೆ ಮುಂದೂಡಲಾಗಿದೆ. ಉಳಿದ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಪ್ರಕಟಿಸಲಾಗಿದ್ದ ವೇಳಾಪಟ್ಟಿಯೂ ಮುಂದುವರಿಯಲಿದೆ ಎಂದು ಸಿಬಿಎಸ್‌ಇ ತಿಳಿಸಿದೆ.
