Home » SSLC ವಿದ್ಯಾರ್ಥಿಗಳೆ, ಪರೀಕ್ಷೆಯ ಕೀ ಉತ್ತರಗಳನ್ನು ಹೀಗೆ ಚೆಕ್ ಮಾಡಿ!!

SSLC ವಿದ್ಯಾರ್ಥಿಗಳೆ, ಪರೀಕ್ಷೆಯ ಕೀ ಉತ್ತರಗಳನ್ನು ಹೀಗೆ ಚೆಕ್ ಮಾಡಿ!!

1 comment
SSLC

SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಆರಂಭವಾಗಿದೆ. ವಿದ್ಯಾರ್ಥಿಗಳು ಸಾಕಷ್ಟು ತಯಾರಿಯ ಬಳಿಕ ಪರೀಕ್ಷೆ ಎದಿರುಸತ್ತಿದ್ದಾರೆ. ಇದರೊಂದಿಗೆ ಪ್ರತಿ ಪರೀಕ್ಷೆ ಬರೆದ ನಂತರ ತನ್ನ ಉತ್ತರ ಸರಿಯೋ? ತಪ್ಪೋ ಎಂದು ಅವರೆಲ್ಲರಿಗೂ ಕುತೂಹಲ. ಹೀಗಾಗಿ ಈ ರೀತಿ ನಿಮ್ಮ ಪರೀಕ್ಷೆಯ ಕೀ ಉತ್ತರಗಳನ್ನು ಚೆಕ್ ಮಾಡಿಕೊಳ್ಳಿ.

ಇದನ್ನೂ ಓದಿ: Aditi Rao Hydari Wedding: ನಟಿ ಅದಿತಿ ರಾವ್-ಸಿದ್ಧಾರ್ಥ್‌ ದೇವಸ್ಥಾನದಲ್ಲಿ ಮದುವೆ

ಹೌದು, ವಿದ್ಯಾರ್ಥಿಗಳ ಕುತೂಹಲ ತಣಿಸಲು ಇಲಾಖೆಯು ವಿದ್ಯಾರ್ಥಿಗಳಿಗೆ ಅನುವು ಮಾಡಿಕೊಟ್ಟಿದೆ. ವಿದ್ಯಾರ್ಥಿಗಳು ಮಾದರಿ ಉತ್ತರಗಳನ್ನು ಇಲಾಖೆಯ ಅಧಿಕೃತ ವೆಬ್ಸೈಟ್‌ನಲ್ಲಿ ಪರಿಶೀಲಿಸಬಹುದಾಗಿದೆ. ಕೆಎಸ್‌ಇಎಬಿ (KSEAB) ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ ಪ್ರಶ್ನೆ ಪತ್ರಿಕೆಯೊಂದಿಗೆ ಉತ್ತರ ಕೀ 2024 ಬಿಡುಗಡೆಯಾಗಲಿದೆ. ಬಳಿಕ ವಿದ್ಯಾರ್ಥಿಗಳು ಈ ಉತ್ತರ ಪತ್ರಿಕೆಯನ್ನು ಡೌನ್‌ಲೋಡ್ ಮಾಡಬಹುದು.

ಇದನ್ನೂ ಓದಿ: Tejswini Gowda: ಧಿಡೀರ್ ಎಂದು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ ತೇಜಸ್ವಿನಿ ಗೌಡ !!

ಉತ್ತರ ಪತ್ರಿಕೆಗಳನ್ನು ಹೀಗೆ ಡೌನ್ಲೋಡ್ ಮಾಡಿ

• ಇಲಾಖೆಯ ಅಧಿಕೃತ ವೆಬ್ಸೈಟ್ kseab.karnataka.gov.in ಭೇಟಿ ನೀಡಿ.

• ಮುಖಪುಟದಲ್ಲಿ ನಿಮಗೆ ಮಾದರಿ ಉತ್ತರಗಳಿಗಾಗಿ ಮತ್ತು ಆಕ್ಷೇಪಣೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಎಂದು ಕಾಣಸಿಗಲಿದೆ. ಅದರ ಮೇಲೆ ಕ್ಲಿಕ್ ಮಾಡಿ

• ಎಸ್ಎಸ್ಎಲ್ಸಿ 2024 ಮಾದರಿ ಉತ್ತರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಅಂತ ಕಾಣಸಿಗುತ್ತೆ. ಅದರ ಮೇಲೆ ಕ್ಲಿಕ್ ಮಾಡಿ.

• ಆಗ ಕರ್ನಾಟಕ ಎಸ್ಎಸ್ಎಲ್ಸಿ ಮಾದರಿ ಉತ್ತರ 2024 ಪುಟ ತೆರೆಯುತ್ತದೆ.

• ನಂತರ ನೀವು ವಿಷಯವಾರು ಮಾದರಿ ಉತ್ತರಗಳನ್ನು ತಿಳಿದುಕೊಳ್ಳಬಹುದು.

• ಹಂತ 6: ಬಳಿಕ ಮಾದರಿ ಉತ್ತರಗಳ ಪಿಡಿಎಫ್ ಅನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಬಹುದು.

You may also like

Leave a Comment