School Holiday: ಅಯೋಧ್ಯೆ ರಾಮ ಮಂದಿರದಲ್ಲಿ ಜನವರಿ 22 ರಂದು ಜರುಗಲಿರುವ ಬಾಲ ರಾಮನ ಪ್ರತಿಷ್ಠಾಪನೆಗೆ ಈಗಾಗಲೇ ಹಲವು ರಾಜ್ಯಗಳಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕರ್ನಾಟಕದಲ್ಲೂ ರಜೆ ಘೋಷಣೆ ಮಾಡಬೇಕೆನ್ನುವ ಆಗ್ರಹ ಹೆಚ್ಚಾಗಿದೆ.
ಆದರೆ ಕರ್ನಾಟಕದ ಕರಾವಳಿಯ ಪ್ರಮುಖ ಶಿಕ್ಷಣ ಸಂಸ್ಥೆಯು ಜ.22 ರಂದು ಸೋಮವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ ಎಂದು ವರದಿಯಾಗಿದೆ. ಮಂಗಳೂರಿನ ಪ್ರಮುಖ ವಿದ್ಯಾಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಸೋಮವಾರ ರಜೆ ಘೋಷನೆ ಮಾಡಿ ಆದೇಶ ಹೊರಡಿಸಿರುವ ಕುರಿತು ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನಿಟ್ಟೆ ವಿಶ್ವವಿದ್ಯಾಲಯ ಜ.22 ರಂದು ವಿದ್ಯಾರ್ಥಿಗಳಿಗೆ ರಜೆ ಘೋಷಣೆ ಮಾಡಿದೆ. ನಿಟ್ಟೆ ಸಂಸ್ಥೆಗೆ ಸಂಬಂಧಿಸಿದ ಜಸ್ಟೀಸ್ ಕೆಎಸ್ ಹೆಗ್ಡೆ ಆಸ್ಪತ್ರೆಯ ಸೇವೆಗಳು ಲಭ್ಯವಿರಲಿದೆ ಎಂದು ವರದಿಯಾಗಿದೆ. ಕೆಲವೊಂದು ಖಾಸಗಿ ಶಾಲೆಗಳು ಈಗಾಗಲೇ ಸ್ವಯಂ ಪ್ರೇರಿತರಾಗಿ ಜ.22 ರಂದು ಸೋಮವಾರ ರಜೆ ಘೋಷಣೆ ಮಾಡಿದೆ.
