Department of Higher education: ವಿದ್ಯಾರ್ಥಿಗಳು ತಮ್ಮ ಇಷ್ಟದ ವಿಷಯವನ್ನು ಆಯ್ಕೆಮಾಡಿಕೊಂಡು ಓದುವಂತೆ ತಾವು ಇಷ್ಟ ಪಟ್ಟ ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಓದಬೇಕು ಅಂದುಕೊಂಡಿರುತ್ತಾರೆ. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಅವಸರ ಅವಸರವಾಗಿ ಇನ್ನೋವುದೋ ಶಂಶ್ಥೆಗೆ ಸೇರುತ್ತಾರೆ. ನಂತರದಲ್ಲೂ ತಾವು ಇಷ್ಟ ಪಟ್ಟ ಕಾಲೇಜು, ಸಂಸ್ಥೆ, ವಿವಿಗಳಿಗೆ ಹೋಗೋಣ ಎಂದರೆ ಅವರು ಪಡುವ ಹರಸಾಹಸ ಯಾರಿಗೂ ಬೇಡ. ಓದುವುದೇ ಬೇಡ ಅನಿಸಿಬಿಡುತ್ತದೆ. ಹೀಗಾಗಿ ಈ ರೋಧನೆಯಿಂದ ವಿದ್ಯಾರ್ಥಿಗಳಿಗೆ ಮುಕ್ತಿ ನೀಡಲು ಶಿಕ್ಷಣ ಇಲಾಖೆಯು(Department of Higher education) ಹೊಸ ನಿಯಮವನ್ನು ಜಾರಿಗೆ ತರಲು ನಿರ್ಧರಿಸಿದೆ.
ಹೌದು, ಪದವಿ ಓದುತ್ತಿರೋ ವಿದ್ಯಾರ್ಥಿಗಳು ಅನಿವಾರ್ಯ ಕಾರಣಗಳಿಗೆ ಕಾಲೇಜು ಬದಲಾಯಿಸಬೇಕಾದ ಸನ್ನಿವೇಶ ಬರುತ್ತೆ. ಒಮ್ಮೆ ಪದವಿ ಆರಂಭವಾದಮೇಲೆ ಅದೇ ಕೋರ್ಸ್ಗೆ ಮತ್ತೊಂದು ಕಾಲೇಜು(College) ಅಥವಾ ವಿವಿ ಸೇರೋದು ಕಷ್ಟವಾಗಿತ್ತು. ಆದರೆ ಈ ವಿಚಾರದಲ್ಲಿ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟಿದ್ದು ಇಂಟರ್ ಯೂನಿವರ್ಸಿಟಿ, ಕಾಲೇಜು ವರ್ಗಾವಣೆಗೆ ಗ್ರೀನ್ ಸಿಗ್ನಲ್ ನೀಡಿದೆ.
ಅಂದಹಾಗೆ ಮೊದಲ ಸೆಮಿಸ್ಟರ್ ಹಾಗೂ ಎರಡನೇ ಸೆಮಿಸ್ಟರ್ ಬೆಂಗಳೂರು ವಿವಿಯಲ್ಲಿ ವ್ಯಾಸಂಗ ಮಾಡಿದ್ದು, ನಂತರ ಮೂರನೇ ಸೆಮಿಸ್ಟರ್ಗೆ ಮತ್ತೊಂದು ವಿವಿಗೆ ಸೇರಿಕೊಳ್ಳಲು ಈ ಹಿಂದೆ ಅವಕಾಶ ಇರಲಿಲ್ಲ. ಇದೀಗ ಕಾಯಿದೆ ತಿದ್ದುಪಡಿ ತಂದಿದ್ದು, ಇಂಟರ್ ಯೂನಿವರ್ಸಿಟಿ ಹಾಗೂ ಅಂತರ್ ಕಾಲೇಜು ಬದಲಾವಣೆಗೆ ಅವಕಾಶ ಮಾಡಿಕೊಡಲಾಗಿದೆ ಎಂದು ಬೆಂಗಳೂರು ವಿವಿ ಪರೀಕ್ಷಾ ವಿಭಾಗದ ರಿಜಿಸ್ಟರ್ ಡಾ.ಶ್ರೀನಿವಾಸ್ ಹೇಳಿದ್ದಾರೆ.
ಆದ್ರೆ ಕೆಲ ವಿವಿಗಳು ಆದೇಶ ಪಾಲಿಸಿದ್ರೆ, ಮತ್ತೆ ಕೆಲ ವಿವಿಗಳು ವಿದ್ಯಾರ್ಥಿಗಳಿಗೆ ಕಾಲೇಜು ಬದಲಾವಣೆ ಮಾಡಿಕೊಳ್ಳಲು ಅವಕಾಶ ನೀಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಇನ್ನೂ ಮಹತ್ವದ ಬದಲಾವಣೆಗಳು ನಡೆಯಲಿವೆ.
ಇದನ್ನೂ ಓದಿ: Women Empowerment Strategy: ಮಹಿಳೆಯರೇ ನಿಮಗೆ ಭರ್ಜರಿ ಸುದ್ದಿ- ಈ ಯೋಜನೆಯಡಿ ಸಿಗುತ್ತೆ ಕೈ ತುಂಬಾ ಸಂಬಳ ಸಿಗೋ ಕೆಲಸ
