Home » AI Technology: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ- ಸರ್ಕಾರದಿಂದ ಹೊಸ ಸೌಲಭ್ಯ ಘೋಷಣೆ!

AI Technology: ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಸಿಹಿ ಸುದ್ದಿ- ಸರ್ಕಾರದಿಂದ ಹೊಸ ಸೌಲಭ್ಯ ಘೋಷಣೆ!

1 comment
AI Technology

AI Technology: ವಿದ್ಯಾರ್ಥಿಗಳಿಗೆ(Students)ಪಠ್ಯ ವಿಷಯಗಳನ್ನು ಸುಲಭವಾಗಿ ಸರಳ ರೀತಿಯಲ್ಲಿ ಪರಿಣಾಮಕಾರಿಯಾಗಿ ಅರ್ಥೈಸಲು ಸರ್ಕಾರಿ ಶಾಲೆಗಳಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ(AI Technology)ಅಳವಡಿಕೆಗೆ ಶಿಕ್ಷಣ ಇಲಾಖೆ ಯೋಜನೆ ಹಾಕಿಕೊಂಡಿದೆ.

ಮೈಕ್ರೋಸಾಫ್ಟ್(Microsoft)ರೂಪಿಸಿದ ‘ಶಿಕ್ಷಾ ಕೋಪೈಲಟ್’ ಎಂಬ ತಂತ್ರಾಂಶದ ಮುಖಾಂತರ ಶಿಕ್ಷಕರು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳಿಗೆ ಪಾಠವನ್ನು ಅರ್ಥ ಮಾಡಿಸಲು ನೆರವಾಗುತ್ತದೆ. ಶಿಕ್ಷಣ ಇಲಾಖೆ ಸಹಕಾರದ ಮೂಲಕ ಮೈಕ್ರೋಸಾಫ್ಟ್ ಕಂಪನಿ ಬೆಂಗಳೂರು ಹೊರವಲಯದ ಅತ್ಯುತ್ತಮ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ತಂತ್ರಾಂಶ ಬಳಕೆಗೆ ಸಮ್ಮತಿ ನೀಡಿದೆ. ಶಿಕ್ಷಕರು ಈಗಾಗಲೇ ತಂತ್ರಜ್ಞಾನ ಬಳಸುತ್ತಿದ್ದು, ವಿದ್ಯಾರ್ಥಿಗಳು ಎಐ ಕುರಿತು ಒಲವು ಹೊಂದಿದ್ದಾರೆ.

ಈ ಕೃತಕ ಬುದ್ಧಿಮತ್ತೆ ಸಹಾಯದಿಂದ ಶಿಕ್ಷಕರು ಕ್ಷಣಾರ್ಧದಲ್ಲಿ ಅಧ್ಯಯನ ಯೋಜನೆ ರೂಪಿಸಲು ಸಾಧ್ಯವಾಗಲಿದೆ.ವಿದ್ಯಾರ್ಥಿ ಗಳಿಗೆ ಅರ್ಥವಾಗದ ಸಂಗತಿಗಳನ್ನು ಗ್ರಾಫಿಕ್ ಮೂಲಕ ತಿಳಿಯಬಹುದು. ಈ ತಂತ್ರಜ್ಞಾನದ ಮೂಲಕ ಮಕ್ಕಳ ಕಲಿಕಾ ಗುಣಮಟ್ಟ ಸುಧಾರಣೆಯಾಗಲಿದೆ.

ಇದನ್ನೂ ಓದಿ: Rain Alert: ಇಂದಿನಿಂದ ರಾಜ್ಯದಲ್ಲಿ ಅಬ್ಬರಿಸಲಿದ್ದಾನೆ ಮಳೆರಾಯ – ಈ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ !!

You may also like

Leave a Comment