Home » Dasara holiday: ಶಾಲೆಗಳ ದಸರಾ ರಜೆ ಮುಂದೂಡಿಕೆ ?! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ !!

Dasara holiday: ಶಾಲೆಗಳ ದಸರಾ ರಜೆ ಮುಂದೂಡಿಕೆ ?! ಕೊನೇ ಕ್ಷಣದಲ್ಲಿ ಹೊಸ ಟ್ವಿಸ್ಟ್ !!

1 comment
Dasara holiday

Dasara holiday: ರಾಜ್ಯದಲ್ಲಿ ದಸರಾ ಹಬ್ಬ ಕಳೆಗಟ್ಟಿದೆ. ಆಯುಧ ಪೂಜೆಯನ್ನು ಸಂಭ್ರಮಿಸಿ ಇಂದು ವಿಜಯದಶಮಿ ಆಚರಣೆಗೆ ನಾಡಿನ ಜನರು ಸಿದ್ಧವಾಗಿದ್ದಾರೆ. ಅಲ್ಲದೆ ಇದೆಲ್ಲಕ್ಕೂ ಮಂಗಳ ಹಾಡಿ ಇಂದಿಗೆ ದಸರಾ ರಜೆ ಪೂರೈಸಿ ನಾಳೆ ರಾಜ್ಯದ ಎಲ್ಲಾ ಶಾಲೆಗಳು ತೆರೆಯಲಿವೆ. ಈ ನಡುವೆ ದಸರಾ ರಜೆ(Dasara holiday ) ಮುಂದೂಡಲಾಗುತ್ತೋ ಇಲ್ಲವೋ ಎಂಬ ಗೊಂದಲ ಹಲವರಲ್ಲಿ ಕಾಡುತ್ತಿದೆ.

ಹೌದು, ದಸರಾ ಹಬ್ಬದ ಸಂದಭ್ರಮದ ನಡುವೆ ಇದೀಗ ದಸರಾ ರಜೆಯ ವಿಚಾರವೂ ಸುದ್ದಿಯಾಗಿದೆ. ಕೆಲ ದಿನಗಳ ಹಿಂದಷ್ಟೇ ದಸರಾ ರಜೆಯ ಅವಧಿ ಕಡಿತ ಮಾಡಲಾಗಿದೆ ಎಂದು ಶಿಕ್ಷಕರು ಆರೋಪಿಸಿದ್ದು ರಜೆ ವಿಸ್ತರಣೆ ಮಾಡಬೇಕೆಂದು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದರು ಇದು ರಾಜ್ಯಾದ್ಯಂತ ಸುದ್ಧಿಯಾಗಿತ್ತು. ಇದನ್ನು ಕೆಲವರು ಬೆಂಬಲಿಸಿದ್ರೆ, ಮತ್ತೆ ಕೆಲವರು ವಿರೋಧಿಸಿದ್ರು.

ಅಂದಹಾಗೆ ಪತ್ರ ಬರೆದ ಶಿಕ್ಷಕರು ಕೂಡ ಕೆಲವು ಅಂಶಗಳನ್ನು ಎತ್ತಿ ಹಿಡಿದಿದ್ದರು. ಏನೆಂದ್ರೆ ಇದು ದಸರಾ ರಜೆ. ದಸರಾ ಹಬ್ಬ ಇರೋದು 24ಕ್ಕೆ. ಆದ್ರೆ ಮರುದಿನವೇ ಅಂದರೆ 25ಕ್ಕೆ ಶಾಲೆ ಓಪನ್. ಒಂದು ದಿನದಲ್ಲಿ ಮಕ್ಕಳು ಹೇಗೆ ಶಾಲೆಗೆ ಬರೋಕೆ ಸಾಧ್ಯ? ದಸರಾ ಹಬ್ಬ ಮರುದಿನವೇ ಶಾಲೆ ಆರಂಭ ಮಾಡ್ತಿರೋದು ಮಕ್ಕಳಿಗೆ ಒತ್ತಡ ಆಗುತ್ತೆ. ಮಕ್ಕಳು ಹಬ್ಬಕ್ಕೆ ಹೋಗಿರ್ತಾರೆ. ಆ ಕಾರಣಕ್ಕೆ ದಸರಾ ರಜೆಯನ್ನು ವಿಸ್ತರಣೆ ಮಾಡಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಶಿಕ್ಷಣ ಸಚಿವರಿಗೆ ಶಿಕ್ಷಕರು ಪತ್ರ ಬರೆದಿತ್ತು. ಆದರೆ ಸರ್ಕಾರ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಆದರೀಗ ಈ ಬೆನ್ನಲ್ಲೇ ಸರ್ಕಾರಕ್ಕೆ ಮತ್ತೊಂದು ಮನವಿ ಬಂದಿದೆ. ಹೌದು, ಯಾವ ಕಾರಣಕ್ಕೂ ದಸರಾ ರಜೆಯನ್ನು ಮುಂದೂಡದೆ ತಕ್ಷಣ ಶಾಲಾ ತರಗತಿಗಳನ್ನು ಪುನರಾರಂಭಿಸಬೇಕು ಎಂದು ಕರ್ನಾಟಕ ರಾಜ್ಯ ಎಸ್ಟಿಎಂಸಿ ಸಮನ್ವಯ ಸಮಿತಿಯ ಅಧ್ಯಕ್ಷ ಮೊಯ್ದಿನ್ ಕುಟ್ಟಿ ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಕನಿಷ್ಠ 800 ಗಂಟೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿಗೆ 1000 ಗಂಟೆಗಳ ಪಾಠ ಆಗಬೇಕಿದೆ. ಆದರೆ ಈ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಗಂಟೆಗಳು ಈಗಾಗಲೇ ಕಡಿಮೆ ಇದೆ, ಅದಲ್ಲದೆ ಸರಕಾರಿ ನೌಕರರ ಅನಧಿಕೃತ ಒಂದು ದಿನದ ಗೈರು ಹಾಜರಿ, ಮಳೆಗಾಲದ ರಜೆಗಳು, ಇದರೊಂದಿಗೆ ಪ್ರತಿಭಾ ಕಾರಂಜಿ, ಕ್ರೀಡಾ ಕಾರ್ಯಕ್ರಮಗಳ ಹೆಸರಲ್ಲಿ ಹೆಚ್ಚಿನ ಶಿಕ್ಷಕರು ಶಾಲೆಯಿಂದ ಹೊರಗೆ ಇದ್ದ ಕಾರಣ ಪಾಠಗಳು ಹಲವಾರು ಗಂಟೆಗಳ ಪಾಠಗಳು ನಡೆದಿರುವುದಿಲ್ಲ. ಹಾಗಾಗಿ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ದೊರಕಿಸಿ ಕೊಡುವಲ್ಲಿ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ಮಕ್ಕಳಿಗೆ ಕಲಿಕೆ ಆಗುವ ರೀತಿಯಲ್ಲಿ ರಜೆಯನ್ನು ಮುಂದೂಡದೆ ಅ.25ರಿಂದಲೇ ಶಾಲೆಯನ್ನು ತೆರೆದು ಪಾಠ ಪ್ರವಚನ ನಡೆಯಲು ಅನುವು ಮಾಡಿ ಕೊಡಬೇಕು ಎಂದು ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ ಮಾಡಿದ್ದಾರೆ.

ಅಂದಹಾಗೆ ಎರಡೂ ರೀತಿಯಿಂದಲೂ ಸರ್ಕಾರಕ್ಕೆ ಮನವಿ ಹೋಗಿದ್ದರೂ ಸರ್ಕಾರದಿಂದಾಗಲಿ, ಶಿಕ್ಷಣ ಇಲಾಖೆಯಿಂದಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆಗಳು ಬಂದಿಲ್ಲ. ಹೀಗಾಗಿ ಸರ್ಕಾರ ಮೊದಲು ತಿಳಿಸಿದಂತೆ ಅಕ್ಟೋಬರ್ 25 ಕ್ಕೆ ಶಾಲೆಗಳು ಆರಂಭವಾಗುವುದು ಆರಂಭ ಆಗುವುದು ಫಿಕ್ಸ್ ಆಗಿದೆ. ಆದರೆ ಬೇಸರದ ಸಂಗತಿ ಅಂದ್ರೆ ಮಕ್ಕಳಿಗೆ ತಿದ್ದಿ ಬುದ್ಧಿ ಹೇಳಿ ಅವರ ಜೀವನವನ್ನು ಬೆಳಕಾಗಿಸುವ ಶಿಕ್ಷಕರು ತಮಗೆ ರಜೆ ಸಾಲದೆಂದು ಸರ್ಕಾರದ ಬಾಗಿಲು ತಟ್ಟಿದ್ದು !! ವಿದ್ಯಾರ್ಥಿಗಳಿಗೆ ಕಲಿಸುವ ಹಂಬಲ, ತವಕ ಅವರಲ್ಲಿರಬೇಕೆ ಹೊರತು ರಜೆ ಬೇಕೆಂಬ ಬಯಕೆ ಇರಬಾರದಲ್ಲವೇ?

ಇದನ್ನೂ ಓದಿ: Congress Guarantees : ಇನ್ಮುಂದೆ ಪುರುಷರಿಗೂ ಗೃಹಲಕ್ಷ್ಮೀಯ ಹಣ, ಉಚಿತ ಬಸ್ ಪ್ರಯಾಣ ?!

You may also like

Leave a Comment