SSLC Supplementary Exam 2023: ವಿದ್ಯಾರ್ಥಿಗಳಿಗೆ (students) ಮಹತ್ವದ ಮಾಹಿತಿ ಇಲ್ಲಿದೆ. ಈ ಬಾರಿಯ ಎಸ್‍ಎಸ್‍ಎಲ್‍ಸಿ ಬೋರ್ಡ್ ಪರೀಕ್ಷೆಯಲ್ಲಿ (SSLC board exam) ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ (SSLC Supplementary Exam 2023) ನಡೆಸಲಾಗುತ್ತದೆ. ಇದೀಗ ಪರೀಕ್ಷೆ ಯಾವಾಗ ನಡೆಯಲಿದೆ ಎಂಬುದರ ಮಾಹಿತಿ ಹೊರಬಿದ್ದಿದೆ.
2022-23ನೇ ಸಾಲಿನ ಎಸ್ಎಸ್ಎಲ್‍ಸಿ ಪರೀಕ್ಷೆಯ ಫಲಿತಾಂಶ ಮೇ 8ರಂದು ಪ್ರಕಟಗೊಂಡಿತ್ತು. ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗೆ ಪೂರಕ ಪರೀಕ್ಷೆ ಏರ್ಪಡಿಸಲಾಗಿದೆ. ಇದೀಗ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಯ ದಿನಾಂಕ ಹಾಗೂ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಂತೆಯೇ ಜೂನ್ 12 ರಿಂದ ಜೂನ್ 19 ರವರೆಗೆ ಎಸ್‍ಎಸ್‍ಎಲ್‍ಸಿ ಪೂರಕ ಪರೀಕ್ಷೆಗಳು ನಡೆಯಲಿವೆ. ಇನ್ನು ವೇಳಾಪಟ್ಟಿಯ ಮಾಹಿತಿ ಈ ಕೆಳಗಿನಂತಿದೆ.


ಇದನ್ನೂ ಓದಿ: Odisha train Tragedy: ಒಡಿಶಾ ರೈಲು ದುರಂತದಲ್ಲಿ ಸತ್ತ 101 ಮೃತದೇಹಗಳ ಮಾಹಿತಿ ಇನ್ನೂ ಸಿಕ್ಕಿಲ್ಲ
